ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ದ್ವಿತೀಯ ಪಿಯುಸಿ(PUC) ಪರೀಕ್ಷೆಯ ಸಮಯವನ್ನು ಕಡಿತಗೊಳಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ. ಹೀಗಾಗಿ ಇನ್ಮುಂದೆ 3 ಗಂಟೆಯ ಬದಲು 2 ಗಂಟೆ 45 ನಿಮಿಷ ಮಾತ್ರ ಪರೀಕ್ಷೆ ಸಮಯವಾಗಿದೆ. ಲಿಖಿತ ಪರೀಕ್ಷೆಯ ಅಂಕ ಕಡಿಮೆ ಮಾಡಿ ಆಂತರಿಕ ಅಂಕಗಳನ್ನು ನಿಗದಿ ಮಾಡಿತ್ತು. ಆದರೆ, ಪರೀಕ್ಷೆ(Exam) ಅವಧಿ ಮೊದಲಿನಂತೆ ಇತ್ತು. ಇದೀಗ 15 ನಿಮಿಷ ಕಡಿಮೆ ಮಾಡಲಾಗಿದೆ.
ಈ ಮೊದಲು 3 ಗಂಟೆ ಪರೀಕ್ಷೆಗೆ ಸಮಯವಿದ್ದರೆ 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ಹೆಚ್ಚುವರಿ ಸಮಯವಿತ್ತು. ಅದನ್ನು ಇಲ್ಲಿ ಮುಂದುವರೆಸಲಾಗಿದೆ. ಆದರೆ, ಉತ್ತರ ಪತ್ರಿಕೆ ವಿದ್ಯಾರ್ಥಿಗಳ ಕೈಗೆ ಬಂದು ಪರೀಕ್ಷೆ ಬರೆಯುವ ಸಮಯ 2 ಗಂಟೆ 45 ನಿಮಿಷ ಇರಲಿದೆ. ಪ್ರಾಯೋಗಿಕ ಇಲ್ಲದ ವಿಷಯಗಳಿಗೆ 80 ಅಂಕದ ಲಿಖಿತ ಪರೀಕ್ಷೆ, ಪ್ರಾಯೋಗಿಕ ವಿಷಯಗಳಿಂದ ವಿಷಯಗಳಿಗೆ 70 ಅಂಕದ ಪರೀಕ್ಷೆ ನಡೆಸಲಾಗುತ್ತಿದೆ.