ಪ್ರಜಾಸ್ತ್ರ ಸುದ್ದಿ
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಾಂಪತ್ಯ ಡಿವೋರ್ಸ್ ಹಂತಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ 20 ವರ್ಷಗಳ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಸೆಹ್ವಾಗ್ ಹಾಗೂ ಪತ್ನಿ ಆರತಿ ಇನ್ ಸ್ಟಾಗ್ರಾಮ್ ನಲ್ಲಿ ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿದ್ದಾರೆ. ಇದು ಈಗ ಕೇಳಿ ಬರುತ್ತಿರುವ ಮಾತುಗಳು ಪುಷ್ಠಿ ನೀಡುವಂತಿದೆ.
ಸೆಹ್ವಾಗ್ ಹಾಗೂ ಆರತಿ 2004ರಲ್ಲಿ ಮದುವೆಯಾಗಿದ್ದಾರೆ. 2007ರಲ್ಲಿ ಆರ್ಯವೀರ್, 2010ರಲ್ಲಿ ವೇದಾಂತ್ ಎನ್ನುವ ಇಬ್ಬರು ಗಂಡು ಮಕ್ಕಳು ಜನಿಸಿದ್ದಾರೆ. ಕೆಲ ತಿಂಗಳುಗಳಿಂದ ಪತಿ, ಪತ್ನಿ ಇಬ್ಬರು ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರಂತೆ. ಕಳೆದ ದೀಪಾವಳಿ ಹಬ್ಬದ ವೇಳೆ ತಾಯಿ ಹಾಗೂ ಮಕ್ಕಳೊಂದಿಗೆ ಇರುವ ಫೋಟೋವನ್ನು ಮಾತ್ರ ಸೆಹ್ವಾಗ್ ಹಂಚಿಕೊಂಡಿದ್ದರು. ಇದೆಲ್ಲವೂ ಸಂಸಾರಿಕ ಜೀವನ ಸರಿಯಿಲ್ಲ ಎಂದು ಹೇಳುತ್ತಿದೆ. ಈಗ ಎದ್ದಿರುವ ಊಹಾಪೋಹಗಳಿಗೆ ಸ್ಪಷ್ಟನೆ ಅವರಿಬ್ಬರೆ ನೀಡಬೇಕಿದೆ.