ಪ್ರಜಾಸ್ತ್ರ ಸುದ್ದಿ
ಪಾಟ್ನಾ(Patna): ದೇಶವನ್ನು ಕೆಲವು ಆಯ್ದ ಸಂಸ್ಥೆಗಳು, ಕೆಲವು ಜನರು ನಿಯಂತ್ರಿಸುತ್ತಿದ್ದಾರೆ. ನಾವು ಬಹುಜನರ ಒಳ್ಳೆಯದಕ್ಕಾಗಿ ಮಿತಿಯನ್ನು ತೆಗೆಯುತ್ತೇವೆ. ಎಸ್ಸಿ, ಎಸ್ಟಿ, ಓಬಿಸಿಗಳಿಗೆ ಶೇಕಡ 50ರಷ್ಟು ಮೀಸಲಾತಿ ಸಾಲುವುದಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದರು. ಬಿಹಾರದ ಪಾಟ್ನಾದಲ್ಲಿ ಶನಿವಾರ ನಡೆದ ಸಂವಿಧಾನ ಸುರಕ್ಷಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಈಗಾಗ್ಲೇ ಎಸ್ಸಿ, ಎಸ್ಟಿ, ಓಬಿಸಿಗಳಿಗೆ ಮೀಸಲು ನಿಗದಿ ಪಡಿಸಿರುವ ಶೇಕಡ 50ರಷ್ಟು ಮೀಸಲಾತಿ ಸಾಲುವುದಿಲ್ಲ ಎಂದರು.
ದೇಶದ ಶೇಕಡ 90ರಷ್ಟು ಜನರು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಇದ್ದಾರೆ. ಅವರ ವ್ಯವಸ್ಥೆ ಇಂದಿಗೂ ಬದಲಾಗಿಲ್ಲ. ಬಿಹಾರದಲ್ಲಿ ನಿತೀಶ ಕುಮಾರ್ ಅವರ ಸರ್ಕಾರ ಜನರಿಗೆ ಮೋಸ ಮಾಡುವ ಗಣತಿ ಮಾಡಿದೆ. ಇದಕ್ಕಾಗಿ ನಾವು ಜಾತಿಗಣತಿಗೆ ಒತ್ತಾಯಿಸುತ್ತಿದ್ದೇವೆ. ಅಧಿಕಾರ ಹಾಗೂ ಇತರೆ ವಲಯಗಳಲ್ಲಿ ದಲಿತರು, ಹಿಂದುಳಿದವರ ಪಾಲು ಎಷ್ಟಿದೆ ಎನ್ನುವುದು ತಿಳಿಯುವುದಾಗಿದೆ ಅಂತಾ ಹೇಳಿದರು.