ಪ್ರಜಾಸ್ತ್ರ ಸುದ್ದಿ
ಹೊಸಕೋಟೆ(Hosakote): ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಹೊಸಕೋಟೆ-ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಸರಣಿ ಅಪಘಾತವಾಗಿದ್ದು, 7 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಾರ್, ಬೈಕ್ ಹಾಗೂ ಕ್ಯಾಂಟರ್ ನಡುವೆ ಸರಣಿ ಅಪಘಾತ ನಡೆದಿದೆ. ವಾಹನಗಳು ಸಂಪೂರ್ಣ ನಜ್ಜಗುಜ್ಜಾಗಿವೆ. ಮೃತರ ಹೆಸರು ಹಾಗೂ ವಿಳಾಸ ತಿಳಿಯಬೇಕಿದೆ.
ರಾಜ್ಯದಲ್ಲಿ ನಿತ್ಯ ಒಂದಲ್ಲ ಒಂದು ಕಡೆ ಅಪಘಾತ ನಡೆಯುತ್ತಿವೆ. ಕಳೆದ ಎರಡು ದಿನಗಳ ಹಿಂದೆ ರಾಯಚೂರಿನಲ್ಲಿ ಅಪಘಾತ ಸಂಭವಿಸಿ ಗರ್ಭಿಣಿ ಸೇರಿ ಇಬ್ಬರು ಮೃತಪಟ್ಟಿದ್ದರು, 14 ಮಂದಿ ಗಾಯಗೊಂಡಿದ್ದರು. ಇದೀಗ ಮತ್ತೊಂದು ಭೀಕರ ಸರಣಿ ಅಪಘಾತ ನಡೆದಿದೆ. ಅತಿಯಾದ ವೇಗ ಇದಕ್ಕೆಲ್ಲ ಕಾರಣವೆಂದು ಹೇಳಲಾಗುತ್ತಿದೆ.




