ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಬೋರಗಿ ಪುರದಾಳದಲ್ಲಿರುವ ವಿಶ್ವರಾಧ್ಯ ಮಠದಲ್ಲಿ ಸಿ.ಎಂ ಮನಗೂಳಿ ಮಹಾವಿದ್ಯಾಲಯದ ಎನ್ಎಸ್ಎಸ್(NSS) ವಿಶೇಷ ವಾರ್ಷಿಕ ಶಿಬಿರದ 6ನೇ ದಿನದ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ರಾಜಶೇಖರ ನರಗೋಧಿ ಅವರು, ಯುವಕರಲ್ಲಿ ಆರೋಗ್ಯ ಹಾಗೂ ವ್ಯಕಿತ್ವ ಬೆಳವಣಿಗೆಯಲ್ಲಿ ಕ್ರೀಡೆಯ ಪಾತ್ರ ಮುಖ್ಯವಾಗಿದೆ. ಹೀಗಾಗಿ ಗುರಿ ಸಾಧಿಸಲು ಆತ್ಮವಿಶ್ವಾಸ ಮತ್ತು ಇಚ್ಛಾಶಕ್ತಿಯಿಂದ ಸತತ ಪ್ರಯತ್ನ ಮಾಡಬೇಕು ಎಂದರು.
ಎನ್ಎಸ್ಎಸ್ ಮೂಲಕ ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳುತ್ತಾರೆ. ಅದು ಸದಾ ಮುಂದುವರೆಯಬೇಕು. ನಾಡು, ನೆಲ, ಜಲ, ಸಂಸ್ಕೃತಿಯನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಬೋರಗಿ ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ಚಾವರ್ ಅಧ್ಯಕ್ಷತೆ ವಹಿಸಿದ್ದರು. ಮುದ್ದೇಬಿಹಾಳದ ಪ್ರಾಧ್ಯಾಪಕ ಬಸವರಾಜ್ ಹಡಪದ, ಶಿವಾನಂದ್ ಚಾವರ್, ಸಿದ್ದಯ್ಯ ಮಠ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರಾಧ್ಯಾಫಕ ಬಿ.ಡಿ.ಮಾಸ್ತಿ ಹಾಗೂ ರಾಹುಲ್ ಕಾಂಬಳೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ತಿಕ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.