ಪ್ರಜಾಸ್ತ್ರ ಸುದ್ದಿ
ಕೊಯಮತ್ತೂರು(Coimbatore): ತಮಿಳುನಾಡಿನ ಪೊಲ್ಲಾಚಿಯಲ್ಲಿ ಕಳೆದ 6 ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯ ಹಾಗೂ ಸುಲಿಗೆ ಪ್ರಕರಣ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ 9 ಜನರನ್ನು ಅಪರಾಧಿಗಳು ಎಂದು ಮಹಿಳಾ ನ್ಯಾಯಾಲಯ ತೀರ್ಪು ನೀಡಿದೆ. ಹೀಗಾಗಿ ಇವರಿಗೆ ಜೀವ ಇರುವ ತನಕ ಜೈಲು ಶಿಕ್ಷೆ ಎಂದು ನ್ಯಾಯಾಧೀಶೆ ಆರ್.ನಂದಿನಿ ಅವರು ತೀರ್ಪು ಪ್ರಕಟಿಸಿದ್ದಾರೆ. ಅಲ್ಲದೆ 8 ಸಂತ್ರಸ್ತರಿಗೆ 85 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ಆದೇಶ ನೀಡಲಾಗಿದೆ.
ಎಂ.ಸತೀಶ್, ಆರ್.ಮಣಿವಣ್ಣನ್ ಅಲಿಯಾಸ್ ಮಣಿ, ಎಂ.ಅರುಣಕುಮಾರ್, ಪಿ.ಬಾಬು ಅಲಿಯಾಸ್ ಬೈಕ್ ಬಾಬು, ರಿಶ್ವನಾಥ್ ಅಲಿಯಾಸ್ ಎನ್.ಶಬರಿರಾಜನ್, ಟಿ.ವಸಂತಕುಮಾರ್, ಕೆ.ತಿರುನಾವುಕ್ಕರಸು, ಹಾರೊನಿಮಸ್ ಪೌಲ್, ಕೆ.ಅರುಳನಾಥಂ ಈ 9 ಜನರನ್ನು ಅಪರಾಧಿಗಳೆಂದು ಸಾಬೀತಾಗಿದೆ. ಇವರೆಲ್ಲ 40 ವರ್ಷದೊಳಗಿನವರಾಗಿದ್ದಾರೆ.
ಅಪರಾಧಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಓರ್ವ ಮಹಿಳೆ ಮೇಲೆ ನಿರಂತರ ಅತ್ಯಾಚಾರವೆಸಗಿದ ಕೃತ್ಯ ಸಾಬೀತಾಗಿದೆ. ಹೀಗಾಗಿ ಇವರೆಲ್ಲರಿಗೂ ಜೀವ ಇರುವ ತನಕ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ 48 ಸಾಕ್ಷಿಗಳಿದ್ದರು. ಚಿಕ್ಕರು, ಸಂತ್ರಸ್ತ ಮಹಿಳೆಯರು ಹಾಗೂ ವಯಸ್ಸಾದ ಪಾಲಕರನ್ನು ಖದ್ದು ಹಾಜರಾತಿಯಿಂದ ವಿನಾಯ್ತಿ ನೀಡಲಾಗಿದೆ.