ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ವಿದ್ಯಾರ್ಥಿನಿ, ಯುವತಿ ಹಾಗೂ ಮಹಿಳೆಯರಿಗೆ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಕಾಮಕ್ರಿಮಿ ಅಮ್ಜದ್ ಎಂಬಾತನನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ದೇವರಾಜ್ ಅರಸು ಬಡಾವಣೆಯ ನಿವಾಸಿ ಅಮ್ಜದ್(56) ಮೆಡಿಕಲ್ ಅಂಗಡಿ ನಡೆಸುತ್ತಾನೆ. ವಿದ್ಯಾರ್ಥಿನಿಯೊಬ್ಬಳ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ ವಿಡಿಯೋ ಸೇರಿದಂತೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಇಎನ್ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮೆಡಿಕಲ್ ಅಂಗಡಿಗೆ ಬರುತ್ತಿದ್ದ ಯುವತಿಯರಿಗೆ, ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಅಲ್ಲದೆ ಮಾರುಕಟ್ಟೆ, ಬಸ್ ನಿಲ್ದಾಣ ಹೀಗೆ ಬೇರೆ ಬೇರೆ ಜಾಗದಲ್ಲಿ ಹಣ್ಮಕ್ಕಳ ವಿಡಿಯೋವನ್ನು ಗುಪ್ತವಾಗಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಅಂಗಡಿಯಲ್ಲಿದ್ದ ಇವನ ಕಂಪ್ಯೂಟರ್ ನಲ್ಲಿ 50ಕ್ಕೂ ಹೆಚ್ಚು ವಿಡಿಯೋಗಳು ಸಿಕ್ಕಿವೆ. ಈ ವಿಚಾರ ತಿಳಿಯುತ್ತಿದ್ದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.