ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): 2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ. ಜವಾನ್ ಚಿತ್ರದ ನಟನೆಗಾಗಿ ನಟ ಶಾರುಖ್ ಖಾನ್, 12th ಫೇಲ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ನಟ ವಿಕ್ರಾಂತ್ ಮ್ಯಾಸ್ಸೆಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಜಂಟಿಯಾಗಿ ನೀಡಲಾಗಿದೆ. ಮಿಸ್ ಚಟರ್ಜಿ ವರ್ಸಸ್ ನಾರ್ವೆ ಚಿತ್ರದಲ್ಲಿನ ನಟನೆಗಾಗಿ ನಟಿ ರಾಣಿ ಮುಖರ್ಜಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ.
ಕನ್ನಡದ ಕಂದೀಲು ಚಿತ್ರ ಅತ್ಯುತ್ತಮ ಕನ್ನಡ ಪ್ರಶಸ್ತಿ ಪಡೆದಿದೆ. ಕನ್ನಡದ ಸನ್ ಪ್ಲವರ್ ವೇರ್ ದಿ ಫಸ್ಟ್ ಒನ್ ಟೂ ನೊ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ನಿರ್ದೇಶಕ ಸುದೀಪ್ತ್ ಸೇನ್( ದಿ ಕೇರಳ ಸ್ಟೋರಿ), ಅತ್ಯುತ್ತಮ ಸಿನಿಮಾ 12th ಫೇಲ್, ಅತ್ಯುತ್ತಮ ಮನರಂಜನಾ ಚಿತ್ರ ರಾಕಿ ಔರ್ ರಾಣಿ ಪ್ರೇಮ್ ಕಹಾನಿ, ಅತ್ಯುತ್ತಮ ಪೋಷಕ ನಟ ವಿಜಯ್ ರಾಘವನ್(ಪೊಕ್ಕಾಲಂ-ಮಲಯಾಳಂ) ಅವರನ್ನು ಆಯ್ಕೆ ಮಾಡಲಾಗಿದೆ.