ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಗುಲಾಮರ ಅಪ್ಪ ಅನ್ನೋ ಫೇಸ್ ಬುಕ್ ಖಾತೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಜಾದ್ ಯುವ ವೇದಿಕೆ ತಾಲೂಕಾಧ್ಯಕ್ಷ ಅಶೋಕ ನೇಗಿನಾಳ, ಉಪಾಧ್ಯಕ್ಷ ವಿನೋದ ಬಡಗೇರ ಮಾತನಾಡಿ, ಅಂಬೇಡ್ಕರ್ ಅವರನ್ನು ಸರಿಯಾಗಿ ಓದಿಕೊಂಡವರು ಈ ರೀತಿ ಮಾಡುವುದಿಲ್ಲ. ಭೀಮರಾಜ ಸೇನೆ ಸಂಘಟನೆಯ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದರು.
ಭಗತ್ ಸಿಂಗ್, ಸಾವರ್ಕರ್ ನಕಲಿ ಫೋಟೋಗಳನ್ನು ಹಾಕಿಕೊಂಡು ನಮ್ಮ ನಮ್ಮ ನಡುವೆ ಕಂದಕ ಸೃಷ್ಟಿ ಮಾಡುತ್ತಾರೆ. ಇಂತವರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಯಾರೋ ಒಬ್ಬರು ಮಾಡಿದ ತಪ್ಪಿಗೆ ಎಲ್ಲರನ್ನು ಅದೆ ರೀತಿ ನೋಡುವಂತಾಗುತ್ತದೆ. ಗುಲಾಮರ ಅಪ್ಪ ಫೇಸ್ ಬುಕ್ ಖಾತೆ ವಿರುದ್ಧದ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ಆಜಾದ್ ಯುವ ವೇದಿಕೆ ತಾಲೂಕಾಧ್ಯಕ್ಷ ಅಶೋಕ ನೇಗಿನಾಳ ಹೇಳಿದರು.
ತಾಲೂಕು ಉಪಾಧ್ಯಕ್ಷ ವಿನೋದ ಬಡಗೇರ ಮಾತನಾಡಿ, ನಮ್ಮ ಧರ್ಮದಲ್ಲಿ ಯಾವುದೇ ಜಾತಿ ಭೇದವಿಲ್ಲ. ಆ ರೀತಿ ಮಾಡುವವರನ್ನು ನಾವು ಸಹಿಸಿಕೊಳ್ಳುವುದಿಲ್ಲ. ಗುಲಾಮರ ಅಪ್ಪ ಅನ್ನೋ ನಕಲಿ ಫೇಸ್ ಬುಕ್ ಖಾತೆ ಮೂಲಕ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ನಮ್ಮ ನಮ್ಮ ನಡುವೆ ಜಾತಿ ವಿಷ ಭೀಜ ಬಿತ್ತುವ ಕುತಂತ್ರ ನಡೆಯುತ್ತಿದೆ ಅನ್ನೋದು ಭಾಸವಾಗುತ್ತಿದೆ. ಇದನ್ನು ನಾವು ಪ್ರಬಲವಾಗಿ ವಿರೋಧ ಮಾಡುತ್ತೇವೆ ಎಂದರು. ಈ ವೇಳೆ ಭೀಮರಾಜ ಸೇನೆ ರಾಜ್ಯಾಧ್ಯಕ್ಷ ಶರಣು ನಾಟಿಕಾರ, ಬಿಜೆಪಿ ಎಸ್ಸಿ ಮೋರ್ಚಾ ತಾಲೂಕಾಧ್ಯಕ್ಷ ಶ್ರೀಕಾಂತ ಬಿಜಾಪುರ, ಚಂದ್ರಕಾಂತ ಚಟ್ಟನಹಳ್ಳಿ ಸೇರಿ ಇತರರು ಉಪಸ್ಥಿತರಿದ್ದರು.




