ಪ್ರಜಾಸ್ತ್ರ ಸುದ್ದಿ
ದುಬೈ(Dubai): ಐಸಿಸಿ 2025ನೇ ಸಾಲಿನ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾ ಎದುರು ಆಡುತ್ತಿದೆ. ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ನಾಯಕ ನಜ್ಮುಲ್ ಹುಸೈನ್ ಸ್ಯಾಂಟೊ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಆಘಾತ ಎದುರಿಸಿದರು ಮುಂದೆ ಬಂದ ಆಟಗಾರರು ಸಹ ಹೆಚ್ಚು ಹೊತ್ತು ನಿಲ್ಲದ ಪರಿಣಾಮ 49.4 ಓವರ್ ಗಳಲ್ಲಿ 228 ರನ್ ಗಳಿಸಿ ಆಲೌಟ್ ಆಯಿತು.
ತೌಹಿದ್ ಹೃದೋಯ್ ಭರ್ಜರಿ ಶತಕ ಸಿಡಿಸಿದರು. ಜಾಕಿರ್ ಅಲಿ 68 ರನ್ ಗಳ ಕಾಣಿಕೆ ನೀಡಿದರು. ಇದರಿಂದಾಗಿ ಬಾಂಗ್ಲಾ ಪಡೆ 200ರ ಗಡಿ ದಾಟಲು ಸಾಧ್ಯವಾಯಿತು. ಅನುಭವಿ ಬೌಲರ್ ಮೊಹಮ್ಮದ್ ಶಮಿ 5 ವಿಕೆಟ್ ಗಳ ಗೊಂಚಲು ಪಡೆದು ಮಿಂಚಿದರು. ಯುವ ಬೌಲರ್ ಹರ್ಷಿತ್ ರಾಣಾ 3 ವಿಕೆಟ್ ಪಡೆದು ಸಂಭ್ರಮಿಸಿದರು. ಅಕ್ಷರ್ ಪಟೇಲ್ 2 ವಿಕೆಟ್ ಪಡೆದು ಸಾಥ್ ನೀಡಿದರು. ಸಧ್ಯ ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ 9 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿದೆ.