ಪ್ರಜಾಸ್ತ್ರ ಸುದ್ದಿ
ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶೆಮಿ ಐಸಿಸಿ ಚಾಂಪಿಯನ್ಸ್ ಟ್ರೋಫಿ-2025ರ ಟೂರ್ನಿಯಲ್ಲಿ 200 ವಿಕೆಟ್ ಗಳ ಸಾಧನೆ ಮಾಡಿದ್ದಾರೆ. ಗುರುವಾರ ಟೀಂ ಇಂಡಿಯಾ ಬಾಂಗ್ಲಾ ದೇಶದ ವಿರುದ್ಧ ಮೊದಲ ಪಂದ್ಯವಾಡಿದ್ದು, ಶಮಿ 5 ವಿಕೆಟ್ ಗಳನ್ನು ಪಡೆದು ಬಾಂಗ್ಲಾ ಆಟಗಾರರನ್ನು ಕಟ್ಟಿ ಹಾಕುವ ಕೆಲಸ ಮಾಡಿದರು. ಇದರ ಜೊತೆಗೆ 200 ವಿಕೆಟ್ ಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾದರು.
104 ಏಕದಿನ ಪಂದ್ಯಗಳಲ್ಲಿ 200 ವಿಕೆಟ್ ಪಡೆಯುವ ಮೂಲಕ ವೇಗವಾಗಿ ಇಷ್ಟೊಂದು ವಿಕೆಟ್ ಪಡೆದ ಮೊದಲ ಟೀಂ ಇಂಡಿಯಾ ಬೌಲರ್ ಎನಿಸಿಕೊಂಡರು. ಈ ಸಾಧನೆ ಮಾಡಲು 5,126 ಬೌಲ್ ಗಳನ್ನು ತೆಗೆದುಕೊಂಡಿದ್ದಾರೆ. ಶೆಮಿ ಹೊಸ ಮೈಲುಗಲ್ಲಿಗೆ ಕ್ರಿಕೆಟ್ ಲೋಕದ ಸಾಧಕರು, ಟೀಂ ಇಂಡಿಯಾ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
2⃣0⃣0⃣ wickets and counting!
Mohd. Shami becomes the fastest bowler for India to scalp 200 ODI wickets! 🫡
Follow the Match ▶️ https://t.co/ggnxmdG0VK#TeamIndia | #BANvIND | #ChampionsTrophy | @MdShami11 pic.twitter.com/CqLyuQPh3X
— BCCI (@BCCI) February 20, 2025