Ad imageAd image

ಮಹಾಂತ ಶಿವಯೋಗಿಗಳ ಕಾರ್ಯ ಪಠ್ಯದಲ್ಲಿ ಸೇರಿಸಬೇಕು: ಶಾಂತಗಂಗಾಧರ ಸ್ವಾಮೀಜಿ

ಇಲಕಲ್ಲ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ಆಚರಿಸಲ್ಪಡುವ ವ್ಯಸನಮುಕ್ತ ದಿನಾಚರಣೆ ಕುರಿತು ಶಾಲಾ ಕಾಲೇಜುಗಳ ಪಠ್ಯಪುಸ್ತಕದಲ್ಲಿ ಒಂದು ವಿಷಯವಾಗಿ ಅಳವಡಿಸಲು

Nagesh Talawar
ಮಹಾಂತ ಶಿವಯೋಗಿಗಳ ಕಾರ್ಯ ಪಠ್ಯದಲ್ಲಿ ಸೇರಿಸಬೇಕು: ಶಾಂತಗಂಗಾಧರ ಸ್ವಾಮೀಜಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಇಲಕಲ್ಲ ಡಾ.ಮಹಾಂತ ಶಿವಯೋಗಿಗಳ(Ilkal mahant swamiji) ಜನ್ಮ ದಿನಾಚರಣೆ ಪ್ರಯುಕ್ತ ಆಚರಿಸಲ್ಪಡುವ ವ್ಯಸನಮುಕ್ತ ದಿನಾಚರಣೆ ಕುರಿತು ಶಾಲಾ ಕಾಲೇಜುಗಳ ಪಠ್ಯಪುಸ್ತಕದಲ್ಲಿ ಒಂದು ವಿಷಯವಾಗಿ ಅಳವಡಿಸಲು ಸರ್ಕಾರ ಗಮನಹರಿಸಬೇಕು ಎಂದು ಗುರುದೇವ ಆಶ್ರಮದ ಶ್ರೀ  ಶಾಂತಗಂಗಾಧರ ಮಹಾಸ್ವಾಮಿಗಳು ಹೇಳಿದರು. ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್‌.ಜಿ.ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಮಹಾಪುರುಷರು, ಮಹಾತಪಸ್ವಿಗಳು ಒಂದಲ್ಲ ಒಂದು ರೀತಿಯಲ್ಲಿ ಸಮಾಜ ಸುಧಾರಣೆ ಕಾರ್ಯದಲ್ಲಿ ತೊಡಗಿದ್ದರು. ಮಹಾಂತ ಶ್ರೀಗಳ ಜನರಲ್ಲಿರುವ ದುಶ್ಚಟಗಳನ್ನು ಬಿಡಿಸಲು ಜೋಳಿಗೆ ಹಿಡಿದು ಊರ ಊರ ತಿರುಗಿ ನಿಮ್ಮಲ್ಲಿರುವ ದುಶ್ಚಟಗಳನ್ನು ಜೋಳಿಗೆಯಲ್ಲಿ ಹಾಕಿಸಿಕೊಳ್ಳುವ ಮೂಲಕ ಅವರನ್ನು ವ್ಯಸನಮುಕ್ತರನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದರು. ಈ ನಿಟ್ಟಿನಲ್ಲಿ ಮಹಾಂತ ಶ್ರೀಗಳ ಜನ್ಮ ದಿನಾಚರಣೆ ದಿನವಾದ ಆಗಸ್ಟ್‌ 1ರಂದು ರಾಜ್ಯ, ಜಿಲ್ಲಾ, ತಾಲೂಕಾ ಮಟ್ಟದಲ್ಲಿ ವ್ಯಸನಮುಕ್ತ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ಪತ್ರಕರ್ತ ಬೆನಕರಾಜ ಜೋಗುರ, ಪ್ರಾಚಾರ್ಯ ಎ.ಆರ್ ಹೆಗ್ಗನದೊಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಉಪನ್ಯಾಸಕ ಎಸ್.ಎ ಪಾಟೀಲ, ಬಿ.ಎಸ್.ಬಿರಾದಾರ, ಡಾ.ಎಸ್. ಎಸ್ ಚವ್ಹಾಣ ಉಪಸ್ಥಿತರಿದ್ದರು. ಉಪನ್ಯಾಸಕರಾದ ಆರ್.ಬಿ ಹೊಸಮನಿ, ಎಂ.ಎನ್ ಅಜ್ಜಪ್ಪ, ಎಫ್.ಎ ಹಾಲಪ್ಪನವರ, ಎಸ್.ಪಿ ಬಿರಾದರ, ಎ.ಬಿ ಪಾಟೀಲ, ಸತೀಶ ಬಸರಕೋಡ, ಎ.ಆರ್ ಸಿಂದಗಿಕರ, ಗಂಗಾರಾಮ್ ಪವಾರ ಸೇರಿ  ಅನೇಕರಿದ್ದರು. ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ನಿರೂಪಿಸಿದರು. ವಿದ್ಯಾರ್ಥಿನಿ ಕಾಶಿಬಾಯಿ ಪ್ರಾರ್ಥಿಸಿದರು. ಉಪನ್ಯಾಸಕ ಸಿದ್ದಲಿಂಗ ಕಿಣಗಿ ಸ್ವಾಗತಿಸಿದರು.

WhatsApp Group Join Now
Telegram Group Join Now
Share This Article