Ad imageAd image

ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ: ಶಾಂತವೀರ ಬಿರಾದಾರ

ಪಟ್ಟಣದ ಅಭಿವೃದ್ಧಿ, ಸೌಂದರೀಕರಣಕ್ಕಾಗಿ ಅನುದಾನ ಸಂಬಂಧ ಶಾಸಕರ ಬಳಿ ಪ್ರಸ್ತಾವನೆ ಸಲ್ಲಿಸೋಣ ಜೊತೆಗೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ವೇಳೆ

Nagesh Talawar
ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ: ಶಾಂತವೀರ ಬಿರಾದಾರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದ ಅಭಿವೃದ್ಧಿ, ಸೌಂದರೀಕರಣಕ್ಕಾಗಿ ಅನುದಾನ ಸಂಬಂಧ ಶಾಸಕರ ಬಳಿ ಪ್ರಸ್ತಾವನೆ ಸಲ್ಲಿಸೋಣ ಜೊತೆಗೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ವೇಳೆ ಸರ್ವಸದಸ್ಯರ ನಿಯೋಗ ತೆರಳಿ ಸರ್ಕಾರಕ್ಕೂ ಮನವಿ ಸಲ್ಲಿಸೋಣ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು. ಇದಕ್ಕೆ ಸದಸ್ಯರು ಸಮ್ಮತಿ ಸೂಚಿಸಿದರು. ಶನಿವಾರ ಪುರಸಭೆ ಕಾರ್ಯಾಲಯದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.

ಮಟನ್, ಚಿಕನ್ ಅಂಗಡಿಗಳು ಎಲ್ಲೆಂದರಲ್ಲಿವೆ. ಅವುಗಳನ್ನು ಮಲಘಾಣ ರಸ್ತೆಯಲ್ಲಿರುವ ಜಾಗದಲ್ಲಿ ಸ್ಥಳಾಂತರಿಸಲಾಗುವುದು, ಅವರಿಗೆ ಬೇಕಾದ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಕೊಡಲಾಗುವುದು ಎನ್ನುವ ವಿಚಾರಕ್ಕೆ ಪರ-ವಿರೋಧದ ಮಾತುಗಳು ಕೇಳಿ ಬಂದವು. ಮಲಘಾಣ ರಸ್ತೆಗೆ ಸ್ಥಳಾಂತರಿಸಿದರೆ ಖರೀದಿಸಲು ಜನರಿಗೆ ತೊಂದರೆಯಾಗುತ್ತೆ. ಈಗ ಇರುವ ಜಾಗದಲ್ಲಿಯೇ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚಿಸಬೇಕು ಎಂದು ಸದಸ್ಯರಾದ ಬಾಷಾಸಾಬ್ ತಾಂಗೋಳಿ, ಸಂದೀಪ ಚೌರ ಹೇಳಿದರು. ಪಟ್ಟಣದ ಸ್ವಚ್ಛತೆಯ ಕಾರಣಕ್ಕೆ ಸ್ಥಳಾಂತರಿಸುವುದು ಒಳ್ಳೆಯದು ಎಂದು ಸದಸ್ಯ ಬಸವರಾಜ ಯರನಾಳ ಹೇಳಿದರು. ಎಸ್ಸಿಪಿ ಎಸ್ಟಿಪಿ ಅನುದಾನ ಸರಿಯಾಗಿ ಬಳಕೆಯಾಗಬೇಕು. ಮೂಲದಲಿತರಿಗೆ ಅದರಿಂದ ಪ್ರಯೋಜನ ಸಿಗಬೇಕು. ಸರ್ಕಾರದ ನಿಯಮಗಳಂತೆ ಶೇಕಡ 24.10ರಷ್ಟು ಉಳಿಕೆಯನ್ನು ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆ ಸಂಪರ್ಕವಾಗಿ ಬಳೆಕೆಯಾಗಬೇಕು ಎಂದು ನಾಮನಿರ್ದೇಶಿತ ಸದಸ್ಯ ಸಾಯಬಣ್ಣ ಪುರದಾಳ ಹೇಳಿದರು.

ಉತಾರೆ ನೀಡುವಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಇದರಿಂದ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಬೇಕೆಂದು ನಾಮನಿರ್ದೇಶಿತ ಸದಸ್ಯ ರಹೀಮ ದುದ್ದನಿ ಹೇಳಿದರು. ಪುರಸಭೆಗೆ ಆಗುವ ಜಮೆ ಹಾಗೂ ಖರ್ಚಿನ ಕುರಿತು ನಾಮನಿರ್ದೇಶಿತ ಸದಸ್ಯ ಸಿದ್ದು ಮಲ್ಲೇದ ಕೇಳಿದರು. ಪುರಸಭೆ ಮುಂಭಾಗದಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸದಂತೆ 35 ಅಂಗಡಿಕಾರರು ಮನವಿಕೊಟ್ಟಿದ್ದು, ಅವುಗಳಿಗೆ ಪುರಸಭೆಗೆ ನಾವು ಬಾಡಿಗೆ ಕೊಡುತ್ತೇವೆ ಎಂದಿದ್ದಾರೆ ಎಂದು ಅಧ್ಯಕ್ಷರು ಪ್ರಸ್ತಾಪಿಸಿದರು. 9ನೇ ವಾರ್ಡಿನಲ್ಲಿ 30 ಅಡಿ ರಸ್ತೆ ಒತ್ತುವರಿಯಾಗಿದೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಇದನ್ನು ತೆರವುಗೊಳಿಸಬೇಕೆಂದು ಸದಸ್ಯ ಹಾಸೀಂ ಆಳಂದ ಲಿಖಿತ ಮನವಿ ಸಲ್ಲಿಸಿದರು. ಗೋಲಿಬಾರ್ ಮಡ್ಡಿ ಜಾಗಕ್ಕೆ ಅದೇ ಹೆಸರು ಇಡುವ ಕುರಿತು ಸದಸ್ಯ ಗೋಲ್ಲಾಳಪ್ಪ ಬಂಕಲಗಿ ಮನವಿ ಸಲ್ಲಿಸಿದರು. ಅಮೃತ 2.0 ಯೋಜನೆಯಡಿ ಜಲಮೂಲಗಳ ಪುನಃಶ್ಚೇತನ, ಹಸಿರು ಜಾಗ ಹಾಗೂ ಉದ್ಯಾನಗಳ ಅಭಿವೃದ್ದಿ ಕಾಮಗಾರಿ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ವಿಚಾರ ಚರ್ಚೆಗೆ ಬಂದಿತು. ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದ ತನಕದ ರಸ್ತೆಗೆ ಹಿರಿಯ ಪತ್ರಕರ್ತ ದಿ.ರೇ.ಚ ರೇವಡಿಗಾರರ ಹೆಸರಿಡುವ ಕುರಿತು ಈ ಹಿಂದೆ ಠರಾವು ಆಗಿದ್ದು, ಅದು ಕಾರ್ಯರೂಪಕ್ಕೆ ತರಬೇಕೆಂದು ಕಾನಿಪ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು. ಈ ವೇಳೆ ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣ, ಮುಖ್ಯಾಧಿಕಾರಿ ಎಸ್.ರಾಜಶೇಖರ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

WhatsApp Group Join Now
Telegram Group Join Now
Share This Article