ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದ ಅಭಿವೃದ್ಧಿ ಹಾಗೂ ಸೌಂದರ್ಯೀಕರಣಕ್ಕಾಗಿ ಅತಿಕ್ರಮಣ ತೆರವು ಕೆಲಸ ಮಾಡಲಾಗುತ್ತಿದೆ. ಬಿಜೆಪಿಯ ಕೆಲವರ ಅಂಗಡಿಯ ಸಲುವಾಗಿ ಪ್ರತಿಭಟನೆಯ ರಾಜಕೀಯ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅತಿಕ್ರಮಣ ತೆರವಿನಿಂದ ಹಿಂದೆ ಸರಿಯುವುದಿಲ್ಲವೆಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು. ಈ ಕುರಿತು ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬೀದಿಬದಿ ವ್ಯಾಪಾರಿಗಳು ಅಂದರೆ ತಳ್ಳುವ ಗಾಡಿಯಲ್ಲಿ ಬಂದು ವ್ಯಾಪಾರ ಮಾಡಿಕೊಂಡು ಸಂಜೆ ಹೋಗುವವರು. ಅತಿಕ್ರಮಣವಾಗಿ ಶೆಡ್ ನಿರ್ಮಿಸಿಕೊಂಡು, ಅದನ್ನು ಬಾಡಿಗೆಗೆ ಕೊಡುವವರು ಅಲ್ಲ.
ಬಸ್ ನಿಲ್ದಾಣದ ಸುತ್ತಮುತ್ತ, ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದ ತನಕವಿದ್ದ ಶೆಡ್ ಗಳನ್ನು ಸ್ವಯಂ ಆಗಿ ತೆರವುಗೊಳಿಸಿದ್ದಾರೆ. ಅದೇ ರೀತಿ ಎಲ್ಲರಿಗೂ ಹೇಳಿದ್ದಾರೆ. ಯಾರು ತೆರವುಗೊಳಿಸಲ್ಲವೋ ಅಂತಹ ಶೆಡ್ ಗಳನ್ನು ತೆಗೆಯುವ ಕೆಲಸ ನಡೆದಿದೆ. ಕೆಲವರು ಐದು, ಆರು ಶೆಡ್ ಗಳನ್ನು ನಿರ್ಮಿಸಿ ಬಾಡಿಗೆ ಕೊಟ್ಟಿದ್ದಾರೆ. ಇದು ಗೂಡಂಗಡಿ ಎನಿಸಿಕೊಳ್ಳುವುದಿಲ್ಲ. ಊರಿಗೆ ಪ್ರವೇಶ ಮಾಡುವ ಜನರಿಗೆ ಒಳ್ಳೆಯ ವಾತಾವರಣ ಕಾಣಿಸಬೇಕು. 20 ವರ್ಷಗಳಿಂದ ಆಗದಿರುವ ಕೆಲಸಗಳನ್ನು ಮಾಡುತ್ತಿದ್ದೇವೆ. ಅದಕ್ಕೆ ಬಹುತೇಕರು ಸಹಕಾರ ನೀಡುತ್ತಿದ್ದಾರೆ. ಫೋನ್ ಮಾಡಿ ಶ್ಲಾಘಿಸುತ್ತಿದ್ದಾರೆ. ಯಾರೋ ಕೆಲವು ಜನರ ಸಲುವಾಗಿ ಅಭಿವೃದ್ಧಿಯಿಂದ ಹಿಂದೆ ಸರಿಯುವ ಮಾತಿಲ್ಲ. ಹಳೆಯ ಬಜಾರ್ ರಸ್ತೆಯಲ್ಲಿನ ಅಂಗಡಿಕಾರರಿಗೂ ದಾಖಲಾತಿಗಳನ್ನು ಒದಗಿಸುವಂತೆ ನೋಟಿಸ್ ನೀಡಲಾಗಿದೆ. ಅತಿಕ್ರಮಗೊಂಡ ಜಾಗಗಳನ್ನು ಅಲ್ಲಿಯೂ ತೆರವುಗೊಳಸಲಾಗುವುದು ಎಂದರು.
ಕೆಇಬಿಯವರಿಗೂ ನೋಟಿಸ್ ಕೊಟ್ಟಿದ್ದು, ನಮ್ಮಿಂದ ಎನ್ ಒಸಿ ಪಡೆದು ಜಾಗಕ್ಕೆ ಬಿಟ್ಟು ಬೇರೆ ಕಡೆ ವಿದ್ಯುತ್ ಸಂಪರ್ಕ ಪಡೆದಿರುವುದನ್ನು ಕಡಿತಗೊಳಿಸಬೇಕು. ಇನ್ನು ಅಕ್ರಮ ನಳಗಳನ್ನು ಸಕ್ರಮ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ದಂಡ ಕಟ್ಟಲಾಗುವುದು. ಇದಕ್ಕಾಗಿ ಸ್ವ್ಕಾಡ್ ಟೀಂ ಸಿದ್ಧ ಪಡಿಸಲಾಗುವುದು ಅಂತಾ ಹೇಳಿದರು. ಈ ವೇಳೆ ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಸಿಬ್ಬಂದಿ ಸಿದ್ದು ಅಂಗಡಿ, ಅಜರ್ ನಾಟಿಕಾರ ಇದ್ದರು.