Ad imageAd image

ತೆರವು ಕಾರ್ಯಾಚರಣೆ ಮುಂದುವರೆಯಲಿದೆ: ಶಾಂತವೀರ ಬಿರಾದಾರ

ಪಟ್ಟಣದ ಪ್ರಮುಖ ರಸ್ತೆಗಳಲ್ಲಿನ ತೆರವು ಕಾರ್ಯಾಚರಣೆಯನ್ನು ಪುರಸಭೆಯವರು ನಿಲ್ಲಿಸಿದ್ದು, ಈಗಾಗಲೇ ತೆರವುಗೊಳಿಸಿದ ಅಂಗಡಿಕಾರರಿಗೆ ಅನ್ಯಾಯವಾಗಿದೆ ಎಂದು ಕೆಲವರು

Nagesh Talawar
ತೆರವು ಕಾರ್ಯಾಚರಣೆ ಮುಂದುವರೆಯಲಿದೆ: ಶಾಂತವೀರ ಬಿರಾದಾರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದ ಪ್ರಮುಖ ರಸ್ತೆಗಳಲ್ಲಿನ ತೆರವು ಕಾರ್ಯಾಚರಣೆಯನ್ನು ಪುರಸಭೆಯವರು ನಿಲ್ಲಿಸಿದ್ದು, ಈಗಾಗಲೇ ತೆರವುಗೊಳಿಸಿದ ಅಂಗಡಿಕಾರರಿಗೆ ಅನ್ಯಾಯವಾಗಿದೆ ಎಂದು ಕೆಲವರು ಜನರ ಮನಸ್ಸನ್ನು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಇಂತಹ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮರ ಪ್ರಕಟಣೆ ನೀಡಿರುವ ಅವರು, ಪಟ್ಟಣದ ಪ್ರಮುಖ ರಸ್ತೆಗಳಾದ ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದವರೆಗೆ, ಅಂಬೇಡ್ಕರ್ ವೃತ್ತದಿಂದ ಕನ್ನಡ ಶಾಲೆಯ ಕಾಂಪೌಂಡಿಗೆ  ಹೊಂದಿಕೊಂಡಿರುವ ಎಲ್ಲ ಅಂಗಡಿಗಳನ್ನು, ಬಸವೇಶ್ವರ ವೃತ್ತದಿಂದ ಕೆಇಬಿವರೆಗಿನ ಎರಡೂ ಬದಿಗಳಲ್ಲಿನ ಅಂಗಡಿಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬ ಇರುವುದರಿಂದ ಮೂರ್ನಾಲ್ಕು ದಿನಗಳವರೆಗೆ ರಜೆ ಇರುವುದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಬಸವೇಶ್ವರ ವೃತ್ತದಿಂದ ವಿವೇಕಾನಂದ ಸರ್ಕಲ್ ಹಾಗೂ ಕನಕದಾಸ ವೃತ್ತದವರೆಗೆ, ಕೆಇಬಿಯಿಂದ ಅಂಬೇಡ್ಕರ್ ವೃತ್ತದವರೆಗೆ,  ಟಿಪ್ಪು ಸುಲ್ತಾನ್ ವೃತ್ತದಿಂದ ಮೋರಟಗಿ ನಾಕಾವರೆಗಿನ ಅಂಗಡಿಕಾರರಿಗೆ ತೆರವುಗೊಳಿಸುವಿಕೆಯ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಮಂಗಳವಾರದಿಂದ ಮೂರು ದಿನ ತೆರವು ಕಾರ್ಯಾಚರಣೆ ನಡೆಸಲಾಗುವುದು. ಯಾರ ಮುಲಾಜಿಗೂ ಒಳಗಾಗದೆ, ಶ್ರೀಮಂತ ಬಡವನೆನ್ನುವ ಭೇಧ-ಭಾವ ಮಾಡದೆ ಸರಕಾರಿ ರಸ್ತೆಯ ಅಳತೆಯ ವ್ಯಾಪ್ತಿಗೆ ಬರುವ ಎಲ್ಲಾ ಅತಿಕ್ರಮಣ ಅಂಗಡಿಗಳನ್ನು ತೆರವುಗೊಳಿಸಲಾಗುವುದೆಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article