ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಸಿಂದಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಬೆಳವಣಿಗೆಗೆ ನಿಮ್ಮೆಲ್ಲ ಸಹಕಾರ ಬೇಕು. ಇನ್ನು ಮುಂದಿನ ದಿನಗಳಲ್ಲಿ ಬ್ಯಾಂಕ್ ಕಡೆಗೂ ಹೆಚ್ಚಿನ ಗಮನ ಹರಿಸುವೆ ಎಂದು ಬ್ಯಾಂಕ್ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು. ಮಂಗಳವಾರ ಪಿಕೆಪಿಎಸ್ ನ 115ನೇ ವರ್ಷದ ವಾರ್ಷಿಕ ಸಾಮಾನ್ಯ(115th Annual General Meeting) ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನನ್ನ ಕೆಲವು ಕಾರಣಗಳಿಂದ ಬ್ಯಾಂಕಿನ ಕಡೆ ಹೆಚ್ಚು ಗಮನ ಹರಿಸಲು ಆಗಿಲ್ಲ. ಇನ್ಮುಂದೆ ಹಾಗೇ ಆಗದಂತೆ ನೋಡಿಕೊಳ್ಳುತ್ತೇನೆ. ಪುರಸಭೆ(Municipal) ಅಧ್ಯಕ್ಷ ಸಹ ಆಗಿರುವುದರಿಂದ ನಿಮ್ಮ ವಾರ್ಡಿನ ಸಮಸ್ಯೆಗಳು ಏನೇ ಇದ್ದರೂ ಸಹ ನನಗೆ ತಿಳಿಸಿ ಅದನ್ನು ಪರಿಹರಿಸುವ ಕೆಲಸ ಮಾಡುವೆ ಎಂದರು.
ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ(CEO) ಸುರೇಶ ಬಿರಾದಾರ(ಮಲಗೊಂಡ) ಮಾತನಾಡಿ, ಸದಸ್ಯರ ಸಹಾಯಕ ಸಕಾರದಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭ ತರುವ ಕೆಲಸ ಮಾಡಲಾಗುವುದು. ಮುಂದಿನ ವರ್ಷದೊಳಗೆ 30 ಲಕ್ಷ ತನಕ ಲಾಭಾಂಶ ತರದೆ ಹೋದರೆ ನಾನು ನನ್ನ ಕೆಲಸಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ಬರುವ ಲಾಭದಲ್ಲಿ ನಿಮ್ಮೆಲ್ಲರಿಗೂ ಅದರಲ್ಲಿ ಪಾಲು ಸಿಗಲಿದೆ. ಹೀಗಾಗಿ ನಮ್ಮೊಂದಿಗೆ ನೀವು ಸದಾ ಸಹಕಾರ ನೀಡಬೇಕು ಎಂದರು. ಸಂಘದ 2024ನೇ ಸಾಲಿನ ಪಕ್ಷನೋಟ ವಿವರಿಸಿದರು.
ರೈತಾಪಿ ವರ್ಗದವರಿಗೆ ಸರ್ಕಾರದಿಂದ ಸಿಗುವ ವಿವಿಧ ಯೋಜನೆಗಳ ಕುರಿತು ಸಲಹೆ ಸೂಚನೆಗಳ ನಿಂಬಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಶಿವಪ್ಪಣ್ಣ ಬಿರಾದಾರ, ಡಿಸಿಸಿ ಬ್ಯಾಂಕ್ ಸಿಂದಗಿ ಶಾಖೆಯ ಶಾಖಾಧಿಕಾರಿ ಎ.ಎಸ್ ಕಲಶೆಟ್ಟಿ ಮಾತನಾಡಿದರು. ರೈತ್ರ ಮಿತ್ರ ಯೋಜನೆ ಅಡಿಯಲ್ಲಿ 10 ಲಕ್ಷ ರೂಪಾಯಿ ಸಾಲ(Loan) ಪಡೆಯಬಹುದು. 5 ಲಕ್ಷ ರೂಪಾಯಿ ತನಕ ಶೂನ್ಯ ಬಡ್ಡಿ, 5 ಲಕ್ಷಕ್ಕೆ ಶೇಕಡ 10ರಷ್ಟು ಬಡ್ಡಿ ಇರುತ್ತೆ. ಹೀಗೆ ಹಲವಾರು ಯೋಜನೆಗಳಿದ್ದು, ಅದರ ಲಾಭ ಪಡೆಯಬೇಕು ಎಂದು ತಿಳಿಸಿದರು.
ಈ ವೇಳೆ ಪಿಕೆಪಿಎಸ್(PKPS) ಉಪಾಧ್ಯಕ್ಷ ಶ್ಯಾಯಪ್ಪ ಪೂಜಾರಿ, ನಿರ್ದೇಶಕರಾದ ಶಂಕರಗೌಡ ಪಾಟೀಲ, ಬಂದೇನವಾಜ ಪಿರಣಗೋಳ, ರಮೇಶ ಪತ್ತಾರ, ಕಲಾವತಿ ಬಿರಾದಾರ ಅವರು ವೇದಿಕೆ ಮೇಲಿದ್ದರು. ಸಿದ್ದಣ್ಣ ಹಿರೇಕುರುಬರ, ಸಂಗನಗೌಡ ಪಾಟೀಲ, ಮುನ್ನಾ ಬೈರಾಮಡಗಿ, ಭೀಮರಾಯ ಸೇರಿದಂತೆ ಸದಸ್ಯರು, ಬ್ಯಾಂಕ್ ಸಿಬ್ಬಂದಿ ವರ್ಗ ಹಾಜರಿದ್ದರು.