ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಕಿದ್ದ ಸವಾಲ್ ಸ್ವೀಕರಿಸಿದ ಸಚಿವ ಶಿವಾನಂದ ಪಾಟೀಲ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸ್ಪೀಕರ್ ಯು.ಟಿ ಖಾದರ್ ಅವರನ್ನು ಭೇಟಿಯಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಒಂದು ವೇಳೆ ಸ್ಪೀಕರ್ ಇದನ್ನು ಸ್ವೀಕಾರ ಮಾಡಿದರೆ ಬಸವನ ಬಾಗೇವಾಡಿ ಕ್ಷೇತ್ರಕ್ಕೆ ಮರು ಚುನಾವಣೆ ನಡೆಯಲಿದೆ. ಶಾಸಕ ಯತ್ನಾಳ್, ಶಿವಾನಂದ ಪಾಟೀಲ ಹಾಗೂ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ನಿಪ್ಪಗ ಹುಟ್ಟಿದ್ದರೆ ಒಂದುವಾರದೊಳಗೆ ರಾಜೀನಾಮೆ ಕೊಡಿ ಎಂದು ಹೇಳಿದ್ದರು. ಅವರ ಮನೆ ಹೆಸರು ಪಾಟೀಲ ಅಲ್ಲ. ಹಚಡದ ಎಂದು ಇದೆ. ರಾಜಕೀಯಕ್ಕಾಗಿ ಅಡ್ಡ ಹೆಸರು ಬದಲಾಯಿಸಿಕೊಂಡಿದ್ದೀರಿ. ರಾಜೀನಾಮೆ ಕೊಟ್ಟು ಬರ್ರಿ. ನಾನು ಬರ್ತಿನಿ. ಗೆದ್ದು ಭಗವಾ ಧ್ವಜ ಹಿಡಿದುಕೊಂಡು ಬರುತ್ತೇನೆ. ನಿನ್ನ ಮಾರಿ ನೋಡಿದರೆ ಗೊತ್ತಾಗುತ್ತೆ. ಯಾರಿಗೆ ಹುಟ್ಟಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಶಿವಾನಂದ ಪಾಟೀಲ ವಿರುದ್ಧ ಅತ್ಯಂತ ಕೆಟ್ಟ ಪದ ಬಳಕೆ ಮೂಲಕ ವಾಗ್ದಾಳಿ ನಡೆಸಿದ್ದಾರೆ.