ಪ್ರಜಾಸ್ತ್ರ ಸುದ್ದಿ
ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರ ನಡುವೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮತ್ತೊಂದು ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ತೆಲುಗಿನ ಯುವ ನಿರ್ದೇಶಕ ಪರಮೇಶ್ವರ್ ಹಿವ್ರಲೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಕಮ್ಯುನಿಸ್ಟ್ ಪಕ್ಷದ ನಾಯಕ ಗುಮ್ಮಡಿ ನರಸಯ್ಯನವರ ಬದುಕಿನ ಕುರಿತು ಹೇಳುವ ಕಥೆಯನ್ನು ಇದು ಹೊಂದಿದೆ. ಸಿನಿಮಾಗೆ ಅವರ ಹೆಸರನ್ನೇ ಟೈಟಲ್ ಇಡಲಾಗಿದೆ.
ಆಂಧ್ರದ ಯೆಲ್ಲಾಂಡು ಮೂಲದ ರಾಜಕಾರಣಿ ಗುಮ್ಮಡಿ ನರಸಯ್ಯ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನ್ಯೂ ಡೆಮಾಕ್ರಸಿ ಸದಸ್ಯರು. 1893-1994 ಹಾಗೂ 1999-2009ರ ತನಕ ಶಾಸಕರಾಗಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಗೆಲುವು ಸಾಧಿಸಿದ್ದರು. ಕ್ರಾಂತಿಕಾರಿ, ಜನಪರ ನಾಯಕನ ಕಥೆಯನ್ನು ಹೇಳಲು ಸಿನಿಮಾ ತಂಡ ಸಿದ್ಧವಾಗಿದೆ. ಎನ್.ಸುರೇಶ್ ರೆಡ್ಡಿ ಬಂಡಾವಳ ಹೂಡುತ್ತಿದ್ದಾರೆ. ಪಸ್ಟ್ ಲುಕ್ ನೋಡಿದರೆ ಶಿವಣ್ಣ ಸಿನಿ ಕರಿಯರ್ ನಲ್ಲಿ ಹೊಸತನದಿಂದ ಕೂಡಿದ ಪಾತ್ರ ಇದಾಗಿದೆ.