ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮೂತ್ರಕೋಶ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಬಳಿಕ ನಟ ಶಿವಕುಮಾರ್ ಮಾತನಾಡಿದ್ದು, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ನಿಮ್ಮೆಲ್ಲರ ಹಾರೈಕೆ, ಪಾರ್ಥನೆಯಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಪೆಥಾಲಜಿ ಸೇರಿ ಎಲ್ಲ ವರದಿಯಲ್ಲಿ ನೆಗೆಟಿವ್ ಬಂದಿದೆ. ಈ ಮೂಲಕ ಶಿವರಾಜಕುಮಾರ್ ಅವರಿಗೆ ಕ್ಯಾನ್ಸರ್ ಇಲ್ಲ ಎಂದು ವೈದ್ಯರು ಹೇಳಿದ್ದಾರೆ ಅಂತಾ ಗೀತಾ ಶಿವರಾಜಕುಮಾರ್ ತಿಳಿಸಿದ್ದಾರೆ.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಭಯ ಎಲ್ಲರಿಗೂ ಇರುತ್ತದೆ. ಈ ಭಯವನ್ನು ನಿಗಿಸಲು ಅಭಿಮಾನಿಗಳು, ಸಹ ಕಲಾವಿದರು, ಕುಟುಂಬದವರು, ಸ್ನೇಹಿತರು ಇರುತ್ತಾರೆ. ಬೆಂಗಳೂರಿನಲ್ಲಿ ಆರೋಗ್ಯ ನೋಡಿಕೊಂಡ ವೈದ್ಯಕೀಯ ಸಿಬ್ಬಂದಿ ಧೈರ್ಯ ತುಂಬಿದರು. ಕಿಮೋ ಮಾಡಿಸುತ್ತಿರುವಾಗಲೇ 45 ಸಿನಿಮಾದ ಕ್ಲೈಮ್ಯಾಕ್ಸ್ ಸಾಹಸ ದೃಶ್ಯಗಳನ್ನು ಮಾಡಿದೆ. ಶಸ್ತ್ರಚಿಕಿತ್ಸೆಗೆ ಹೊರಡುವ ಸಂದರ್ಭದಲ್ಲಿ ಆತಂಕ ಜಾಸ್ತಿಯಾಗಿತ್ತು. ಎಲ್ಲರೂ ಧೈರ್ಯ ತುಂಬಿದರು. ನನಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಿಲ್ಲ. ಮೂತ್ರಕೋಶ ತೆಗೆದು ಹೊಸ ಮೂತ್ರಕೋಶ ಹಾಕಿದ್ದಾರೆ. ಒಂದು ತಿಂಗಳು ವಿಶ್ರಾಂತಿಗೆ ಸೂಚಿಸಿದ್ದಾರೆ. ಜನರ ಆಶೀರ್ವಾದ ಯಾವತ್ತೂ ಮರೆಯಲ್ಲ. ಮಾರ್ಚ್ ನಿಂದ ಶೂಟಿಂಗ್ ನಲ್ಲಿ ಭಾಗವಹಿಸುತ್ತೇನೆ. ಐ ವಿಲ್ ಬಿ ಬ್ಯಾಕ್ ಎಂದಿದ್ದಾರೆ.