ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ವಿರುದ್ಧ ನಟ ದರ್ಶನ್ ಅಭಿಮಾನಿಗಳೆಂದು ಹೇಳುತ್ತಿರುವವರು ಅಶ್ಲೀಲ ಮೆಸೇಜ್ ಕಳಿಸಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ನಟಿ ರಮ್ಯಾ ಪರ ನಟ ಶಿವಣ್ಣ, ಪತ್ನಿ ಗೀತಾ ಹಾಗೂ ನಟ ವಿನಯ್ ರಾಜಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ನಟ ಯುವ ರಾಜಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಇವರು ಸಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಹಾಗೂ ಯುವ ರಾಜಕುಮಾರ್ ನಡುವಿನ ಸಮಸ್ಯೆಯ ವಿಚಾರದ ಕುರಿತು ಯಾಕೆ ಧ್ವನಿ ಎತ್ತಿಲ್ಲ. ಮಲಗಿಕೊಂಡಿದ್ರಾ ಎಂದಿದ್ದಾರೆ.
‘ಮಾಧ್ಯಮಗಳಲ್ಲಿ ಮಹಿಳೆಯನ್ನು ಅವಮಾನಿಸುವುದರ ವಿರುದ್ಧ ಮಾತನಾಡುವುದು ನೋಡುವಾಗ ತಮ್ಮ ಕುಟುಂಬದಲ್ಲೇ ಇದೆಲ್ಲ ನಡೆಯುವಾಗ ಮಾತಾಡದೆ ಸುಮ್ಮನೆ ಇದ್ರಲ್ಲ, ಆವಾಗ ನಿದ್ದೆ ಮಾಡ್ತಾ ಇದ್ರಾ ಎಲ್ಲ ಎಂದು ಬರೆಯುವ ನಟ ಶಿವರಾಜಕುಮಾರ್ ದಂಪತಿಯ ಪೋಸ್ಟ್ ಗೆ ಟಾಂಗ್ ಕೊಟ್ಟಿದ್ದಾರೆ.
ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನು ಕೀಳಾಗಿ ಕಾಣೋ ಪ್ರಪಂಚ, ಬೆಳವಣಿಗೆಗೂ ಮುನ್ನ ನಾಶವಾಗಬೇಕು ಎಂದು ನಟ ವಿನಯ್ ರಾಜಕುಮಾರ್ ಪೋಸ್ಟ್ ಹಾಕಿದ್ದಾರೆ. ಅದನ್ನು ತೆಗೆದುಕೊಂಡು ಎಲ್ಲಿದಪ್ಪ ಎನ್ನುವ ಮೂಲಕ ರಾಜಕುಮಾರ್ ಕುಟುಂಬದ ಸದಸ್ಯರ ವಿರುದ್ಧ ಕಿಡಿ ಕಾರಿದ್ದಾರೆ. ಯುವ ರಾಜಕುಮಾರ್ ಹಾಗೂ ಶ್ರೀದೇವಿ ನಡುವಿನ ಕಿತ್ತಾಟ ಸುದ್ದಿಯಾದಾಗ ಈ ಬಗ್ಗೆ ಇವರು ಯಾರು ಮಾತನಾಡಿಲ್ಲ ಅನ್ನೋದು ಇವರ ಆಕ್ರೋಶಕ್ಕೆ ಕಾರಣವಾಗಿದೆ.