ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರೌಡಿ ಶೀಟರ್ ಗಳಾದ ಮನೋಜ್ ಹಾಗೂ ಲೋಕೇಶ್ ಅಲಿಯಾಸ್ ಲೋಕಿ ಗ್ಯಾಂಗ್ ನಡುವೆ ದಾಳಿ ನಡೆದಿತ್ತು. ಇದಾದ ಬಳಿಕ ತಲೆ ಮರೆಸಿಕೊಂಡಿದ್ದ ಲೋಕಿ ಹಾಗೂ ಆತನ ಸಹಚರರನ್ನು ಬಂಧಿಸುವ ವೇಳೆ ಗುಂಡಿನ ದಾಳಿ ನಡೆದಿದೆ. ಆನೇಕಲ್ ತಾಲೂಕಿನ ಮಾಯಸಂದ್ರಕ್ಕೆ ಹೋಗಿದ್ದ ವೇಳೆ ರೌಡಿ ಶೀಟರ್ ಲೋಕೇಶ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ನೋಡುತ್ತಿದ್ದ ವೇಳೆ ಜಿಗಣಿ ಠಾಣೆ ಇನ್ಸ್ ಪೆಕ್ಟರ್ ಮಂಜುನಾಥ್ ಕಾಲಿಗೆ ಗುಂಡು ಹಾರಿಸಿ, ವಶಕ್ಕೆ ಪಡೆದಿದ್ದಾರೆ. ಬೆಸ್ತಮಾನಹಳ್ಳಿಯ ಲೋಕೇಶ್ ಹಾಗೂ ಮನೋಜ್ ನಡುವೆ ಇತ್ತೀಚೆಗೆ ಗಲಾಟೆ ನಡೆದಿತ್ತು.