ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ದರೋಡೆಕೋರರ ಗ್ಯಾಂಗ್ ಆತಂಕ ಸೃಷ್ಟಿಸಿದೆ. ಬೀದರ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ ನಡೆಸಿ ಓರ್ವನನ್ನು ಕೊಂದು ಎಟಿಎಂ ಲೂಟಿ ಮಾಡಿದ್ದರು. ಇತ್ತ ವಿಜಯಪುರದಲ್ಲಿ ಕಳೆದ ರಾತ್ರಿ ಜೈನಾಪುರದಲ್ಲಿ ಮನೆಯೊಂದಕ್ಕೆ ನುಗ್ಗಿ ಪತಿ, ಪತ್ನಿ ಮೇಲೆ ಹಲ್ಲೆ ಮಾಡಿ ಚಿನ್ನದ ಕರ ಕಸೆದುಕೊಂಡು ಎಸ್ಕೇಪ್ ಆಗಿದ್ದಾರೆ. ಇವರ ಅಟ್ಟಹಾಸ ಮಟ್ಟ ಹಾಕಲು ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದು ಇಂದು ಓರ್ವನ ಮೇಲೆ ಫೈರಿಂಗ್ ಮಾಡಿ ವಶಕ್ಕೆ ಪಡೆದಿದ್ದಾರೆ.
ಕನಕದಾಸ ಬಡಾವಣೆಗೆ ನುಗ್ಗಿದ ನಾಲ್ವರನ್ನು ಬಂಧಿಸಲು ಪ್ಲಾನ್ ಮಾಡಲಾಗಿತ್ತು. ಆದರೆ ಆಗಿರಲಿಲ್ಲ. ಬೇರೊಂದು ಕಳ್ಳತನಕ್ಕೆ ಬಂದಿದ್ದಾಗ ನಗರದ ಹೊರವಲಯದ ಸ್ಪಂದನ ಆಸ್ಪತ್ರೆ ಹತ್ತಿರ ಗುಂಡಿನ ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಗೋಳಗುಮ್ಮಟ ಠಾಣೆ ಸಿಪಿಐ ಮಲ್ಲಯ್ಯ ಮಠಪತಿ ಅವರಿಂದ ಫೈರಿಂಗ್ ನಡೆದಿದೆ. ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಗಾಂಧಿ ಚೌಕ್, ಗೋಲಗುಮ್ಮಟ, ಗ್ರಾಮೀಣ ಠಾಣೆಯ ಸಿಪಿಐಗಳ ತಂಡವೊಂದನ್ನು ರಚಿಸಿದ್ದರು. ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದಾಗ ಓರ್ವನ ಬಂಧನವಾಗಿದೆ.