ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಶೂಟಿಂಗ್ ಸಲುವಾಗಿ ಅರಣ್ಯಭೂಮಿಯಲ್ಲಿನ ನೂರಾರು ಮರಗಳನ್ನು ಅಕ್ರಮವಾಗಿ ಕಡೆಯಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಸ್ಯಾಟ್ ಲೈಟ್ ಚಿತ್ರಗಳಿಂದ ಸ್ಪಷ್ಟವಾಗಿ ಕಾಣುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಅಲ್ಲದೆ ಅಕ್ರಮದ ಕೃತ್ಯಕ್ಕೆ ಹೊಣೆಯಾದವರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.
ಎಚ್.ಎಂ.ಟಿ ವಶದಲ್ಲಿರುವ ಅರಣ್ಯಭೂಮಿಯಲ್ಲಿ ನೂರಾರು ಮರಗಳನ್ನು ಕಡಿದು ಹಾನಿ ಮಾಡಲಾಗಿದೆ. ಇಲ್ಲಿ 20 ಎಕರೆ ಭೂಮಿ ಎಚ್.ಎಂ.ಟಿ ವಶದಲ್ಲಿದೆ. ಕಳೆದ 2 ತಿಂಗಳಿನಿಂದ ಶೂಟಿಂಗ್ ನಡೆಯುತ್ತಿದೆ. ಇಲ್ಲೊಂದು ಊರು ರೀತಿ ಶೆಟ್ ನಿರ್ಮಿಸಲಾಗಿದೆ. ಪೀಣ್ಯ ಪ್ಲಾಂಟೇಷನ್ 599 ಎಕರೆ ಮೀಸಲು ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದೆ. 1950ರಲ್ಲಿ ದಾನದ ರೂಪದಲ್ಲಿ ಎಚ್.ಎಂ.ಟಿ ಸಂಸ್ಥೆಗೆ ಮಂಜೂರಾಗಿದೆ. ಇದು ಮುಂದೆ ಸರ್ಕಾರಿ, ಖಾಸಗಿ ಸಂಸ್ಥೆಗಳಿಗೆ, ಖಾಸಗಿ ವ್ಯಕ್ತಿಗಳಿಗೆ ಮಾರಾಟವಾಗಿದೆ. 20ಕ್ಕೂ ಹೆಚ್ಚು ಎಕರೆ ಕೆನರಾ ಬ್ಯಾಂಕಿಗೆ ಮಾರಾಟವಾಗಿದೆ. ಇಲ್ಲಿಯೇ ಶೂಟಿಂಗ್ ನಡೆಯುತ್ತಿದೆ.
ಇಲ್ಲಿ ಶೂಟಿಂಗ್ ನಡೆಸಲು ಬಿಬಿಎಂಪಿ ಅನುಮತಿ ಕೊಟ್ಟಿದೆಯಂತೆ. ಆದರೆ, ನೂರಾರು ಮರಗಳನ್ನು ಕಡಿದ ಹಾಕಿರುವುದು ಪರಿಸರ ಪ್ರೇಮಿಗಳು ಸೇರಿದಂತೆ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಕೆವಿಎನ್ ಪ್ರೊಡೆಕ್ಷನ್ ಹೆಸರಲ್ಲಿ ವೆಂಕಟ್ ಕೆ.ನಾರಾಯಣ್ ಹಾಗೂ ಮೋನ್ ಸ್ಟಾರ್ ಮೈಂಡ್ ಕ್ರಿಯೇಷನ್ ಅಡಿಯಲ್ಲಿ ನಟ ಯಶ್ ಸಹ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಗೀತು ಮೋಹನದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈಗ ಇವರಿಗೆ ಸಂಕಟ ಎದುರಾಗಲಿದೆ.