ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಉದ್ಯಮಿಯೊಬ್ಬರ ಮೇಳೆ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಎರಡು ಸುತ್ತಿನ ಗುಂಡು ಹಾರಿಸಿದ್ದ ಗಾಯಗೊಂಡಿರುವ ಉದ್ಯಮಿ ಪ್ರಫುಲ್ ಎಂಬುವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣೇಶಪುರದ ಹಿಂದೂರಸ್ತೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಪ್ರಫುಲ್ ಬಾಲಕೃಷ್ಣ ಪಾಟೀಲ(30) ಎಂಬುವರ ಕಾರು ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ನಿಖರ ಕಾರಣ ತಿಳಿದು ಬಂದಿಲ್ಲ. ವ್ಯವಹಾರಿಕ ಕಾರಣಗಳು ಏನಾದರೂ ಇರಬಹುದಾ ಎಂದು ಶಂಕಿಸಲಾಗಿದೆ. ಪೊಲೀಸ್ ತನಿಖೆಯಿಂದ ಸತ್ಯ ತಿಳಿದು ಬರಬೇಕಿದ್ದು, ಗುಂಡಿನ ದಾಳಿ ನಡೆಸಿದವರ ಪತ್ತೆ ಕಾರ್ಯ ನಡೆದಿದೆ.