ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶ್ರಾವಣ ಕಾವ್ಯ ಸಂಭ್ರಮ, ಮಕ್ಕಳೆ ರಚಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರವನ್ನು ಉದ್ಘಾಟಿಸಿ ಮಾತನಾಡಿದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಜಿ.ಎಚ್ ಮಣ್ಣೂರ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಸಾಹಿತ್ಯದ ಸಂಸ್ಕಾರ ನೀಡುವುದು ಅವಶ್ಯವಾಗಿದೆ. ಕವಿಗಳ ಕಾವ್ಯ, ಕಥೆ ವಿವಿಧ ಸಾಹಿತ್ಯದ ಪ್ರಕಾರಗಳನ್ನು ಮಕ್ಕಳಿಂದಲೇ ಓದಿಸಿ ಚಿತ್ರ ತೆಗೆಸುವುದರ ಮೂಲಕ ಮಕ್ಕಳ ಮೇಲೆ ಕವಿಗಳ ಪ್ರಭಾವ ಬೀರಿ ಭವಿಷ್ಯದಲ್ಲಿ ಖ್ಯಾತ ಕವಿ ಸಾಹಿತಿಗಳಾಗಬಲ್ಲರು. ವರಕವಿ ಬೇಂದ್ರೆ ಅವರ ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ ಬಂತು ಶ್ರಾವಣ ಮಾಸವನ್ನು ಸಂಭ್ರಮಿಸುವ ಹಾಡು ಸುಂದರವಾಗಿ ಮೂಡಿಬಂದಿದೆ ಎಂದು ಹೇಳಿದರು.
ಈ ವೇಳೆ ವಿದ್ಯಾರ್ಥಿಗಳು ಖ್ಯಾತ ಕವಿಗಳ ಕವನ ವಾಚನ ಮಾಡಿದರು. ವೇದಿಕೆಯ ಮೇಲೆ ಮುಖ್ಯೋಪಾಧ್ಯಯ ರಮೇಶ ಕೊಟ್ಯಾಳ, ಶಾಲಾ ಪ್ರತಿನಿಧಿ ಕಾರ್ಯದರ್ಶಿಗಳಾದ ಸಮರ್ಥ ಮಿರ್ಜಿ, ವೈಷ್ಣವಿ ಹತ್ತಳ್ಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪಾಲಕರು ಉಪಸ್ಥಿತರಿದ್ದರು.