ಪ್ರಜಾಸ್ತ್ರ ಸುದ್ದಿ
ದುಬೈ(Dubai): ಇಲ್ಲಿನ ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಭಾನುವಾರ ಭಾರತ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಿವೆ. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲಿಯೇ ಆಘಾತ ಎದುರಿಸಿದ ಟೀಂ ಇಂಡಿಯಾ 30 ರನ್ ಗಳಿಸುವಷ್ಟರಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಗಿಲ್ ವಿಕೆಟ್ ಕಳೆದುಕೊಂಡಿತು. ಈ ಮೂಲಕ ದೊಡ್ಡ ಗುರಿ ನೀಡುವ ಆಸೆ ನಿರಾಸೆಯಾಯಿತು.
ಮುಂದೆ ಶ್ರೇಯಸ್ ಅಯ್ಯರ್ 79, ಅಕ್ಷರ್ ಪಟೇಲ್ 42, ಹಾರ್ದಿಕ್ ಪಾಂಡ್ಯೆ 45 ರನ್ ಗಳಿಂದಾಗಿ 249 ರನ್ ಗಳವರೆಗೆ ಬಂದಿತು. ಕೆ.ಎಲ್ ರಾಹುಲ್ 23, ಜಡೇಜಾ 16, ಶೆಮಿ 5 ರನ್ ಗಳಿಸಿ ಔಟ್ ಆದರು. ಅಂತಿಮವಾಗಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ 5 ವಿಕೆಟ್ ಪಡೆದು ಮಿಂಚಿದರು. ಜೇಮ್ಸನ್, ನಾಯಕ ಸ್ಯಾಂಟ್ನರ್, ಓರೂರಕ್ ಹಾಗೂ ರಚಿನ್ ತಲಾ 1 ವಿಕೆಟ್ ಪಡೆದರು.