ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು. ದೇವಸ್ಥಾನ ಕಟ್ಟುವುದು ಶೂದ್ರರು. ಅದರೊಳಗೆ ಇರೋರು ಬ್ರಾಹ್ಮಣರು. ಹಿಂದೂ ಧರ್ಮವೆಂದರೆ ಅದು ಹಿಂದೂಗಳ ಧರ್ಮವಲ್ಲ. ಬ್ರಾಹ್ಮಣರ ಧರ್ಮ. ಗಂಡಸರನ್ನು ಮಾತ್ರ ಬ್ರಾಹ್ಮಣರು ಎನ್ನುತ್ತಾರೆ. ಹೆಂಗಸರನ್ನು ಶೂದ್ರರು ಅಂತಾನೆ ಕರೆಯುತ್ತಾರೆ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್ ಭಗವಾನ್(KS Bhagavan) ಹೇಳಿದ್ದಾರೆ. ಮಹಿಷ (Mahisha Dasara) ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶೂದ್ರರು ದೇವಸ್ಥಾನಕ್ಕೆ ಹೋಗುವುದು ನಿಲ್ಲಿಸಬೇಕು. ನಾನು ದೇವಸ್ಥಾನಕ್ಕೆ ಹೋಗಿ 50 ವರ್ಷ ಆಯ್ತು. ಏನೂ ಆಗಿಲ್ಲ. ನೀವು ಹುಂಡಿಗೆ ದುಡ್ಡು ಹಾಕ್ತೀರ. ತೆಂಗಿನಕಾಯಿ ಒಡೆದು ಅರ್ಧ ಇಟ್ಟುಕೊಂಡು ಅರ್ಧ ಕೊಡುತ್ತಾರೆ. ಜ್ಞಾನ ಇಲ್ಲದ ಕಾರಣ ಹಲವಾರು ಜನರು ಗುಲಾಮರಾಗಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.