ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಕೆಪಿಸಿಸಿ(KPCC) ಅಧ್ಯಕ್ಷರ ಬದಲಾವಣೆ ವಿಚಾರ ಭರ್ಜರಿ ಚರ್ಚೆಯಾಗುತ್ತಿದೆ. ಮುಂದಿನ ಸಿಎಂ ದಲಿತ ಸಮುದಾಯದ ನಾಯಕರಿಗೆ ಕೊಡಬೇಕು ಎನ್ನುವುದು, ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬದಲಾಗಬೇಕು ಎನ್ನುವ ಮಾತುಗಳು ಕೇಳಿ ಬಂದಿದ್ದು, ಶೀಘ್ರದಲ್ಲಿ ಎಸ್ಸಿ, ಎಸ್ಟಿ(SC-ST) ಸಮಾವೇಶ ಮಾಡಲು ಈ ಸಮುದಾಯದ ಸಚಿವರ ಪಡೆ ಸಜ್ಜಾಗಿದೆ. ಈ ಬಗ್ಗೆ ಮಾತನಾಡಿರುವ ಸಚಿವ ಸತೀಶ ಜಾರಕಿಹೊಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ಬೇಕು. ಅವರು ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವು ಗೆಲ್ಲಬೇಕು ಅಂದರೆ ಅವರು ಇರಬೇಕು. ಹೊಸ ನಾಯಕತ್ವ ತಯಾರಾಗುವ ತನಕ ಪಕ್ಷದಲ್ಲಿ ಅವರು ಇರುವುದು ಅನಿವಾರ್ಯ ಎಂದರು.
ಅಧಿಕಾರ(Power Sharing) ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಬೇಕು. ಇವರೆ ಮುಂದುವರೆಯುತ್ತಾರೋ ಇಲ್ಲವೋ ಅದು ನಮಗೆ ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತೋ ಇಲ್ಲವೋ ನೋಡೋಣ. ನಮ್ಮಲ್ಲಿ ವಿರೋಧವಿಲ್ಲ. ಆದರೆ, ನಮ್ಮ ಅಭಿಪ್ರಾಯಗಳನ್ನು ಹೇಳುವ ಸ್ವಾತಂತ್ರ್ಯವಿದೆ. ಹೀಗಾಗಿ ಹೈಕಮಾಂಡ್ ಗೆ ಹೇಳಿದ್ದೇವೆ. ಹಾಗಂತ ಇಲ್ಲಿ ವಿರೋಧ, ಪರ ಎನ್ನುವುದಿಲ್ಲ ಎಂದು ಮಾಧ್ಯಮದವರಿಗೆ ತಿಳಿಸಿದರು.