ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಯಾವಾಗ ಎಂದು ಗೊತ್ತಿಲ್ಲ. ಆದರೆ, ಡಿಕೆಶಿ ಸಿಎಂ ಆಗಲು ಸಿದ್ದರಾಮಯ್ಯ ಬೆಂಬಲ ಬೇಕು ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ. ಗುರುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 10 ಶಾಸಕರನ್ನು ಇಟ್ಟುಕೊಂಡು ಸಿಎಂ ಆಗಲು ಆಗುವುದಿಲ್ಲ. ಡಿಕೆಶಿ ಖಂಡಿತ ಸಿಎಂ ಆಗುತ್ತಾರೆ. ಅದಕ್ಕೆ ಸಿದ್ದರಾಮಯ್ಯ ಬೆಂಬಲ ಬೇಕು ಎನ್ನುವ ಮೂಲಕ ಜಿಟಿಡಿ ಸಿದ್ದರಾಮಯ್ಯ ಬಿಟ್ಟು ಡಿಕೆಶಿ ಏನಾದರೂ ಪ್ಲಾನ್ ಮಾಡಿದರೆ ನಡೆಯುವುದಿಲ್ಲ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.