Ad imageAd image

ಸಿಂದಗಿ: 842 ಸರ್ವೇ ನಂಬರ್ ಸಂತ್ರಸ್ತರಿಗೆ ಬದಲಿ ನಿವೇಶನದ ಭರವಸೆ

Nagesh Talawar
ಸಿಂದಗಿ: 842 ಸರ್ವೇ ನಂಬರ್ ಸಂತ್ರಸ್ತರಿಗೆ ಬದಲಿ ನಿವೇಶನದ ಭರವಸೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದ ಸೋಂಪುರ ರಸ್ತೆಯಲ್ಲಿನ 842 ಸರ್ವೇ ನಂಬರ್ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದಂತೆ ತೆರವುಗೊಳಿಸುವ ಕೆಲಸ ಸೋಮವಾರ ನಡೆಯಿತು. ಇಲ್ಲಿದ್ದ 80 ಕುಟುಂಬಗಳನ್ನು ತಾತ್ಕಾಲಿಕವಾಗಿ ನಿರಾಶ್ರಿತ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ ಹೇಳಿದರು. ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯ, ಮಾಂಗಲ್ಯ ಭವನ, ಅಬು ಪಂಕ್ಷನ್ ಹಾಲ್ ಹೀಗೆ ಬೇರೆ ಬೇರೆ ಕಡೆ ಆಶ್ರಯ ಕಲ್ಪಿಸಲಾಗಿದೆ. 15 ಟ್ರ್ಯಾಕ್ಟರ್ ಗಳ ಮೂಲಕ ಸ್ಥಳಾಂತರಿಸಲಾಗಿದೆ ಎಂದರು.

ಆಶ್ರಯ ಸಮಿತಿಗೆ ಶಾಸಕರು ಅಧ್ಯಕ್ಷರಿದ್ದಾರೆ. ಅಂತರಗಂಗಿ ರಸ್ತೆಯಲ್ಲಿನ 565 ಸರ್ವೇ ನಂಬರ್ ನಲ್ಲಿ 10 ಎಕರೆ ಜಾಗವಿದೆ. ಅದರಲ್ಲಿ 411 ನಿವೇಶನಗಳಿದ್ದು, ಈಗಾಗ್ಲೇ 180 ವಿತರಣೆ ಮಾಡಲಾಗಿದೆ. ಉಳಿದ ನಿವೇಶನಗಳಲ್ಲಿ ಇಲ್ಲಿನ ಫಲಾನುಭವಿಗಳಿಗೆ ನೀಡಲಾಗುವುದು. ಮನೆಗಳನ್ನು ನಿರ್ಮಿಸಿಕೊಳ್ಳಲು ಸರ್ಕಾರದ ಯೋಜನೆಗಳ ಮೂಲಕ ಆರ್ಥಿಕ ನೆರವು ನೀಡಲಾಗುವುದು ಎಂದರು. ಇದಕ್ಕೂ ಮೊದಲು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಮಾತನಾಡಿ, 842 ಸರ್ವೇ ನಂಬರ್ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಾವ ಯಾವ ಸಮಯದಲ್ಲಿ ಏನೆಲ್ಲ ಆಗಿದೆ ಅನ್ನೋದನ್ನು ತಿಳಿಸಿದರು. ಈ ಜಾಗದಲ್ಲಿ 14 ಮನೆಗಳು, 20 ಕಚ್ಚಾ ಮನೆಗಳು, 41 ಶೆಡ್ ಗಳು, 9 ಖಾಲಿ ಜಾಗಗಳಿದ್ದು, ಇವುಗಳಲ್ಲಿ 26 ಮಾರಾಟ ಮಾಡಲಾಗಿದೆ ಎಂದರು.

ಇನ್ನು ತೆರವು ಕಾರ್ಯಾಚರಣೆಯ ವೇಳೆ ಸೂಕ್ತ ಬಂದೋಬಸ್ತಿಗಾಗಿ 80 ಪುರುಷ ಪೊಲೀಸ್ ಸಿಬ್ಬಂದಿ, 30 ಮಹಿಳಾ ಪೊಲೀಸ್ ಸಿಬ್ಬಂದಿ, 6 ಸಬ್ ಇನ್ಸ್ ಪೆಕ್ಟರ್, ಇಬ್ಬರು ಪಿಎಸ್ಐ, ಒಂದು ಐಆರ್ ಬಿ ಹಾಗೂ 2 ಡಿಆರ್ ವಾಹನ ನಿಯೋಜನೆ ಮಾಡಲಾಗಿತ್ತು ಎಂದು ಸಿಪಿಐ ನಾನಾಗೌಡ ಪೊಲೀಸಪಾಟೀಲ ಹೇಳಿದರು.

WhatsApp Group Join Now
Telegram Group Join Now
Share This Article