ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಸಿಂದಗಿ ಹಾಗೂ ಅಸಂತಪುರ ನಡುವೆ ಸಂಚರಿಸುವ ಬಸ್ 2ನೇ ಬಾರಿಗೆ ಮತ್ತೆ ಅಪಘಾತವಾಗಿದೆ. ಶುಕ್ರವಾರ ಸಾಯಂಕಾಲ ಖಾನಾಪುರ ಬ್ರಹ್ಮದೇವನಮಡು ಮಾರ್ಗ ನಡುವೆ ಬಸ್ ರಸ್ತೆ ಪಕ್ಕದಿಂದ ಸಂಪೂರ್ಣವಾಗಿ ಹೊರಗೆ ಹೋಗಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಅನಾಹುತವಾಗಿಲ್ಲ. ಈ ಘಟನೆಯಿಂದಾಗಿ ಸಾರ್ವಜನಿಕರು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಈ ತಿಂಗಳು ಆರಂಭದಲ್ಲಿಯೇ ಇದೇ ಮಾರ್ಗದ ಬಸ್ ಅಪಘಾತವಾಗಿದೆ. ಮನ್ನಾಪುರ ಹತ್ತಿರ ಅಪಘಾತವಾಗಿದೆ. ಇತ್ತೀಚೆಗೆ ಗೋಲಗೇರಿಯ ಕೆಇಬಿ ಹತ್ತಿರವೂ ಇದೇ ರೀತಿ ಅಪಘಾತ ಸಂಭವಿಸಿತ್ತು. ಈಗ ಮತ್ತೊಮ್ಮೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಹೋಗಿದೆ. ಇದಕ್ಕೆ ರಸ್ತೆ ಸರಿಯಿಲ್ಲದಿರುವುದು ಹಾಗೂ ತುಂಬಾ ಹಳೆಯದಾದ ಬಸ್ ಗಳನ್ನು ಓಡಿಸುತ್ತಿರುವುದರಿಂದ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.