ಪ್ರಜಾಸ್ತ್ರ ಬ್ರೇಕಿಂಗ್ ನ್ಯೂಸ್
ಸಿಂದಗಿ(Sindagi): ಪಟ್ಟಣದ ಹೊರವಲಯದ ಆದರ್ಶ ಸರ್ಕಾರಿ ಶಾಲೆಯ ಹತ್ತಿರ ಬುಧವಾರ ಸಂಜೆ ಸುಮಾರು 7.20ರ ಹೊತ್ತಿಗೆ ಬೈಕ್ ವೊಂದು ಅಪಘಾತವಾಗಿದೆ. ಸಿಂದಗಿ ಕಡೆಗೆ ಬರುತ್ತಿದ್ದಾಗ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಅಪಘಾತವಾಗಿದೆ. ಅಂದಾಜು 40 ರಿಂದ 45 ವರ್ಷದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದು, ಅವರ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಇಲ್ಲಿನ ತಿರುವಿನಲ್ಲಿ ಯಾವುದೇ ರೋಡ್ ಬ್ರೇಕ್ ಇಲ್ಲದೆ ಇರುವುದರಿಂದ ಪದೆಪದೆ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಇಲ್ಲಿ ರೋಡ್ ಬ್ರೇಕ್ ನಿರ್ಮಿಸಬೇಕು ಎಂದು ಸುತ್ತಲಿನ ವಸತಿ ನಿಲಯದ ವಿದ್ಯಾರ್ಥಿಗಳು ಈ ವೇಳೆ ಆಗ್ರಹಿಸಿದ್ದಾರೆ.