ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಚಾಲಕನ ನಿಯಂತ್ರಣ ತಪ್ಪಿ ಬೈಕ್ ಅಪಘಾತವಾದ ಘಟನೆ ಸಿಂದಗಿ ಪಟ್ಟಣದ ಹೊರವಲಯದ ಆದರ್ಶ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯ ಹತ್ತಿರ ನಡೆದಿದೆ. ಮಂಗಳವಾರ ಸಂಜೆ ಸುಮಾರು 4.15ರ ವೇಳೆ ಈ ಒಂದು ಅಪಘಾತ ಸಂಭವಿಸಿದೆ. ಆಲಗೂರು ಗ್ರಾಮದ ಗೊಲ್ಲಾಳಪ್ಪ ಕೊಂಡಗೂಳಿ ಅನ್ನೋ ಬೈಕ್ ಸವಾರನಿಗೆ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಅಪಘಾತದ ಬಗ್ಗೆ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ಶಾಂತು ಬಿರಾದಾರ ಎಂಬುವರು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ತಕ್ಷಣ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಬಂದು ಮುಳ್ಳುಕಂಟಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಿ ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ದಾಖಲಿಸಿದ್ದು, ಯಾವುದೇ ರೀತಿ ಅಪಾಯವಿಲ್ಲವೆಂದು ತಿಳಿದು ಬಂದಿದೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.




