ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದ ಮೊರಟಗಿ ರಸ್ತೆಯ ಎನ್ಎಚ್ 50ರ ಬಳಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಹರನಾಳ.ಕೆ ಗ್ರಾಮದ ಸುನಿಲ್ ಸಾಲೋಟಗಿ ಅನ್ನೋ 24 ವರ್ಷದ ಯುವಕ ಮೃತಪಟ್ಟಿದ್ದಾನೆ. ಬಸ್ ಸಿಂದಗಿ ಡಿಪೋಗೆ ಸಂಬಂಧಿಸಿದ್ದಾಗಿದೆ.
ಮುಂಬೈನಲ್ಲಿರುವ ಮಿನಿಸ್ಟರಿ ಆಪ್ ಡಿಪೆನ್ಸ್ ಗವರ್ನಮೆಂಟ್ ಆಪ್ ಇಂಡಿಯಾ ನೆವಿಯಲ್ಲಿ ಎಲೆಕ್ಟ್ರಿಕ್ ಮೆಕ್ಯಾನಿಕಲ್ ರೇಡಿಯೋ ಅಂತಾ ಮೃತ ಸುನಿಲ್ ಕೆಲಸ ಮಾಡುತ್ತಿದ್ದ. ಒಂದು ತಿಂಗಳು ರಜೆ ಮೇಲೆ ಬಂದಿದ್ದ ಸುನಿಲ್ ಹುಬ್ಬಳ್ಳಿಗೆ ಹೋಗುವ ಸಲುವಾಗಿ ಸಿಂದಗಿವರೆಗೂ ತನ್ನ ಬೈಕ್ ಮೂಲಕ ಬಂದು ಅಲ್ಲಿಂದ ಬಸ್ಸಿನ ಮೂಲಕ ಹೋಗಬೇಕು ಎಂದು ಬರುತ್ತಿದ್ದಾಗ ಕಳೆದ ಸೆಪ್ಟೆಂಬರ್ 8ರಂದು ಮುಂಜಾನೆ ಸುಮಾರು 6.45ರ ಹೊತ್ತಿನಲ್ಲಿ ಬಸ್ಸಿಗೆ ಹಿಂದಿನಿಂದ ಡಿಕ್ಕಿಯಾಗಿ ಮೃತಪಟ್ಟಿದ್ದಾನೆ. ಕೆಎಸ್ಆರ್ ಟಿಸಿ ಬಸ್ ಚಾಲಕ ಏಕಾಏಕಿ ನಿಲ್ಲಿಸಿದ ಪರಿಣಾಮ ಅಪಘಾತವಾಗಿದಿದೆ ಎಂದು ಮೃತನ ಕುಟುಂಬಸ್ಥರು ಸಿಂದಗಿ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. ಸೆಪ್ಟೆಂಬರ್ 16ರಂದು ಪೊಲೀಸರು ಪಂಚನಾಮೆ ಮಾಡಿದ್ದಾರೆ.