ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ 6 ತಿಂಗಳಿಂದ ವೇತನ ಪಾವತಿಯಾಗದೆ ಹಿನ್ನಲೆಯಲ್ಲಿ, ಅಸಹಕಾರ ಚಳವಳಿ ಎಂದು ತಿಳಿಸಲಾಗಿದೆ. ಈ ಸಂಬಂಧ ರಾಜ್ಯ ನರೇಗಾ ಕ್ಷೇಮಭಿವೃದ್ಧಿ ಸಂಘದ ನಿರ್ಣಯದಂತೆ ಸಿಂದಗಿ ಮತ್ತು ಆಲಮೇಲ ತಾಲೂಕು ನರೇಗಾ ಸಂಘದ ಅಧ್ಯಕ್ಷರಾದ ಭೀಮರಾಯ ಚೌಧರಿ ಇವರ ನೇತೃತ್ವದಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ರಾಮು.ಜಿ ಅಗ್ನಿ ಅವರಿಗೆ ಮನವಿ ಸಲ್ಲಿಸಲಾಯಿತು.
2 ತಾಂತ್ರಿಕ ಸಂಯೋಜಕರು, 2 ಎಮ್ಐಎಸ್ ಸಂಯೋಜಕರು, 2 ಐಇಸಿ ಸಂಯೋಜಕರು, 2 ಆಡಳಿತ ಸಹಾಯಕರು, 4 ತಾಂತ್ರಿಕ ಸಹಾಯಕರು, 7 ಬಿಎಫ್ ಟಿಗಳು ಮತ್ತು 14 ಗ್ರಾಮ ಕಾಯಕ ಮಿತ್ರರು ಸೇರಿದಂತೆ ಒಟ್ಟು 33 ಜನ ಸಿಬ್ಬಂದಿ ನರೇಗಾ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು 6 ತಿಂಗಳಿಂದ ವೇತನ ಪವತಿಯಾಗದೆ ಇರುವದರಿಂದ 2025 ಜುಲೈ 7ರಿಂದ ವೇತನ ಪಾವತಿಯಾಗುವವರೆಗೂ ಅಸಹಕಾರ ಚಳುವಳಿ ಹಮ್ಮಿಕೊಳ್ಳಲಾಗುವದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಈ ವೇಳೆ ಸಿಬ್ಬಂದಿ ಶಿವಶರಣ ವಂದಗನೂರ, ಪುಂಡಲೀಕ ಬಿಸೆ, ಬಸವರಾಜ ಹುಣಸಗಿ, ಸಂದೀಪ ಪಶುಪತಿಮಠ, ಸಾಗರ ಶೆಟ್ಟಿ, ರವಿ ರಾಠೋಡ, ಪೂಜಾ, ಆರಿಫ್ ಹಾಜರಿದ್ದರು.