ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ 9 ವರ್ಷದ ಬಾಲಕನೊಬ್ಬ ಮೇ 18, ಭಾನುವಾರದಂದು ಕಾಲುವೆಗೆ ಬಿದ್ದ ಘಟನೆ ನಡೆದಿತ್ತು. ಮಂಗಳವಾರ ಬಾಲಕ ಸಿದ್ದಪ್ಪ ದೇವೇಂದ್ರ ಹುಣಶ್ಯಾಳ ಎಂಬಾತನ ಮೃತದೇಹ ಪತ್ತೆಯಾಗಿದೆ. ಯರಗಲ್ ಹತ್ತಿರ ಬಾಲಕನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ವ್ಯಾಪಕ ಮಳೆಯಾಗುತ್ತಿರುವುದರಿಂದ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿ ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಪತ್ತೆಗಾಗಿ ಸಾಕಷ್ಟು ಹರಸಾಹಸ ಪಡಬೇಕಾಯಿತು. ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಘಟನೆ ಹಿನ್ನಲೆ: ಕಳೆದ ಭಾನುವಾರ ತಾಯಿ ಬಟ್ಟೆ ತೊಳೆಯಲು ಹೋದಾಗ ಬಾಲಕ ಸಿದ್ದಪ್ಪ ದೇವೇಂದ್ರ ಹುಣಶ್ಯಾಳ ತಾಯಿಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಮನೆಗೆ ಹೋಗು ಎಂದು ತಾಯಿ ಹೇಳಿದರೂ ಕೇಳದೆ ಈಜುತ್ತೇನೆಂದು ಕಾಲುವಿಗೆ ಜಿಗಿದಿದ್ದಾನಂತೆ. ಹೊನ್ನಳ್ಳಿ ಗ್ರಾಮದ ದೇವೇಂದ್ರ ಹುಣಶ್ಯಾಳ ಹಾಗೂ ಲಲಿತಾ ಎಂಬುವರ ಏಕೈಕ ಮಗನಾಗಿದ್ದಾನೆ. ಈ ದಂಪತಿಗೆ ಐವರು ಪುತ್ರಿಯರಿದ್ದಾರೆ. ಇದೀಗ ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.