ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಶಾಲೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಕಚೇರಿಗೆ ಭೇಟಿ ನೀಡುವುದಾಗಲಿ ಮಾಡಬಾರದು. ತರಬೇತಿ, ಸಭೆ, ಕಾರ್ಯಕ್ರಮಗಳಲ್ಲಿ ಇಲಾಖೆಯ ಅಧಿಕೃತ ಆದೇಶವಿಲ್ಲದೆ ಭಾಗವಹಿಸಬಾರದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮುಖ್ಯಗುರುಗಳು ಹಾಗೂ ಸಹ ಶಿಕ್ಷಕರಿಗೆ ಸೂಚನೆ ನೀಡಲಾಗದೆ. ಸರ್ಕಾರದ ಆದೇಶದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾಂತೇಶ ಬ.ಯಡ್ರಾಮಿ ಅವರು ಸೂಚನೆ ನೀಡಿದ್ದಾರೆ.
ಕಚೇರಿಗೆ ಸಂಬಂಧಿಸಿದ ಕೆಲಸಗಳಿಗೆ ಶನಿವಾರದಂದು ಶಾಲೆಯ ಅವಧಿ ಮುಗಿದ ಬಳಿಕ ಭೇಟಿ ನೀಡುವುದು, ಆಡಳಿತಾತ್ಮಕ ವಿಷಯಗಳಿದ್ದಾಗ ಶಾಲೆಯ ಮುಖ್ಯಗುರುಗಳು ವಾಟ್ಸಪ್ ಸಂದೇಶ ಕಳುಹಿಸುವುದು, ಸಂಘದ ಪದಾಧಿಕಾರಿಗಳು ಸಹ ಶಾಲೆಯ ಅವಧಿಯಲ್ಲಿ ಶಾಲೆಯಲ್ಲಿ ಹಾಜರು ಇರಬೇಕು. ಉಸ್ತುವಾರಿ ಅಧಿಕಾರಿಗಳಾದ ಸಿಆರ್ ಪಿ, ಬಿಆರ್ ಪಿ, ಇಸಿಓ, ಬಿಐಇಆರ್ ಟಿ ಸಿಬ್ಬಂದಿ ಕಚೇರಿಯ ಸೂಚನೆ ಇಲ್ಲದೆ ಆಗಮಿಸಬಾರದು. ನಿಮ್ಮ ವ್ಯಾಪ್ತಿಯ ಶಾಲೆಗಳಿಗೆ ಪ್ರವಾಸ ಕಾರ್ಯಕ್ರಮ ಪ್ರಕಾರ ಭೇಟಿ ನೀಡಿ ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು. ಹೀಗೆ ಹಲವು ಅಂಶಗಳನ್ನೊಳಗೊಂಡ ಸೂಚನೆಯನ್ನು ಹೊರಡಿಸಲಾಗಿದೆ.