Ad imageAd image

ಸಿಂದಗಿ ಒಂದು ಪುಣ್ಯ ಭೂಮಿ: ಡಿ.ಎಂ ಹಿರೇಮಠ

ಸಾರಂಗಮಠವು ಸಮಾಜ, ಸಂಸ್ಕೃತಿ, ಸಾಹಿತ್ಯ ಅಪೂರ್ವವಾಗುವ ರೀತಿಯಲ್ಲಿ ಬೆಳೆಸಿಕೊಂಡು ಬಂದಿದ್ದು ಅನನ್ಯ. ಸಿಂದಗಿ ಒಂದು ಪುಣ್ಯ ಭೂಮಿ ಮತ್ತು ಸುಕ್ಷೇತ್ರ ಎಂದು ಹೇಳಲು ನನಗೆ ಅತೀವ ಸಂತೋಷ ಎನಿಸುತ್ತದೆ ಎಂದು

Nagesh Talawar
ಸಿಂದಗಿ ಒಂದು ಪುಣ್ಯ ಭೂಮಿ: ಡಿ.ಎಂ ಹಿರೇಮಠ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಸಾರಂಗಮಠವು ಸಮಾಜ, ಸಂಸ್ಕೃತಿ, ಸಾಹಿತ್ಯ ಅಪೂರ್ವವಾಗುವ ರೀತಿಯಲ್ಲಿ ಬೆಳೆಸಿಕೊಂಡು ಬಂದಿದ್ದು ಅನನ್ಯ. ಸಿಂದಗಿ ಒಂದು ಪುಣ್ಯ ಭೂಮಿ ಮತ್ತು ಸುಕ್ಷೇತ್ರ ಎಂದು ಹೇಳಲು ನನಗೆ ಅತೀವ ಸಂತೋಷ ಎನಿಸುತ್ತದೆ ಎಂದು ಧಾರವಾಡದ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಿ.ಎಂ.ಹಿರೇಮಠ ಹೇಳಿದರು. ಪಟ್ಟಣದ ಸಾತವೀರೇಶ್ವರ ಸಭಾಭವನದಲ್ಲಿ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಅಂಗ ಸಂಸ್ಥೆಯಾದ ಆರ್.ಡಿ.ಪಾಟೀಲ, ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪಠ್ಯಪೂರಕ ಚಟುವಟಿಕೆ, ರೋವರ್ ಮತ್ತು ರೇಂಜರ್, ಭಾರತ ಸೇವಾದಳ, ಎನ್.ಎಸ್.ಎಸ್. ಘಟಕಗಳ ಉದ್ಘಾಟನೆ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರಿಕ್ಷೇಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವರಕವಿ ಡಾ.ಬೇಂದ್ರೆಯವರು ಗಾರುಡಿಗರಾಗಿ, ಸಾಹಿತಿಯಾಗಿ, ಚಿಂತಕರಾಗಿ, ದಾರ್ಶನಿಕರಾಗಿ ಜನ ಮಾನಸದಲ್ಲಿ ಅಚ್ಚಳಿಯಾಗಿ ಉಳಿದಿದ್ದಾರೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ್ದಾರೆ. ಅಜ್ಞಾನದಿಂದ ಜ್ಞಾನದೆಡಗೆ ತೆಗೆದುಕೊಂಡು ಹೋಗಲು ಕಾಯಕಯೋಗಿ ಲಿಂ. ಶ್ರೀ ಚನ್ನವೀರ ಮಹಾಸ್ವಾಮೀಜಿಗಳ ಕಾರ್ಯ ಅಮೋಘವಾಗಿದೆ. ಇಂದು ಈ ಸಂಸ್ಥೆಯಲ್ಲಿ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ಹೆಮ್ಮೆಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರವಾಡದ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರಾದ ಅನಂತ ದೇಶಪಾಂಡೆ ಮಾತನಾಡಿ, ಮಾನವ ಕಲಿಯಬೇಕು. ಆಮೇಲೆ ಹೊಟ್ಟೆ ತುಂಬಿಸಿಕೊಳ್ಳಬೇಕು. ದುಡಿಯುವ ತನಕ ಅನ್ನ ಸಿಗುವುದಿಲ್ಲ. ಹಾಗಾಗಿ ನಾವು ದುಡಿಯಬೇಕು. ಸಿಹಿ ಯಾವಾಗ ತಿಂದರೂ ಅದು ಹೇಗೆ ಸಿಹಿಯಾಗಿಯೇ ಇರುತ್ತದೆಯೋ ಹಾಗೆ ನಾವು ಎಲ್ಲರೂ ಯಾವಾಗಲೂ ಒಳ್ಳೆಯ ಕಾರ್ಯಗಳನ್ನು ಮಾಡುತ್ತಲೇ ಇರಬೇಕು. ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎಂದು ಸೌಹಾರ್ದತೆಯ ಸಂದೇಶವನ್ನು ವರಕವಿ ಡಾ.ದ.ರಾ.ಬೇಂದ್ರೆಯವರು ಸಾರಿದ್ದಾರೆ ಎಂದು ಹೇಳಿದರು.

ಈ ವೇಳೆ ನಿವೃತ್ತರಾದ ನಿವೃತ್ತ ಪ್ರಾಚಾರ್ಯ ವಿಮಲಕಾಂತ ಪಾಟೀಲ, ನಿವೃತ್ತ ಪ್ರಯೋಗಾಲಯ ಸಹಾಯಕ ಆಯ್.ಎಸ್.ಶಿವಸಿಂಪಗೇರ ದಂಪತಿಗಳಿಗೆ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ 284 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ್ದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಕಾರ್ಯದರ್ಶಿ ಅಶೋಕ ವಾರದ, ನಿರ್ದೇಶಕ ಎಚ್.ಎಂ.ಪೂಜಾರ, ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಮಾತನಾಡಿದರು. ಪಿ.ವ್ಹಿ.ಮಹಲಿನಮಠ, ಎಸ್.ಜಿ.ಮಾರ್ಸನಳ್ಳಿ, ಎನ್.ಬಿ.ಪೂಜಾರಿ, ಶಿವಶರಣ ಬೂದಿಹಾಳ, ಬಸವರಾಜ ಜಮಾದಾರ, ಸುನೀಲ ಪಾಟೀಲ, ಡಾ.ಶರಣಬಸವ ಜೋಗುರ, ಪ್ರಸನಕುಮಾರ ಜೋಗೂರ, ಡಾ.ವಿಶ್ವನಾಥ ನಂದಿಕೋಲ, ಸಂಗಮೇಶ ಚಾವರ, ನವೀನ ಶೆಳ್ಳಗಿ, ರೋಹಿತ್ ಸುಲ್ಪಿ, ಆರ್.ಎಂ.ಕೊಳ್ಳೂರೆ, ರೇಖಾ ಕನ್ನೂರ, ಜೆ.ಎಂ.ಗಾಣಗೇರ, ಪಿ.ಎಸ್.ಸರನಾಡಗ್‌ಔಡ, ಶಿವಯೋಗಿ ತಾಳಿಕೋಟಿ, ರಾಹುಲ ನಾರಾಯಣಕರ್, ಗವಿಸಿದ್ದಪ್ಪ ಆನೆಗುಂದಿ, ಶಿವರಾಜ ಕುಂದಗೋಳ, ವ್ಹಿ.ಕೆ.ಹಿರೇಮಠ, ಸುಭಾಸ ಹೊಸಮನಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

WhatsApp Group Join Now
Telegram Group Join Now
Share This Article