ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಎಲ್ಲೆಡೆ ನೋಲು ಹುಣ್ಣಿಮೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ಅದರಲ್ಲಿ ಸಹೋದರ-ಸಹೋದರಿಯ ನಡುವಿನ ಬಾಂಧವ್ಯದ ಸಂಕೇತವಾದ ನೋಲು ಹುಣ್ಣಿಮೆಯು ಒಂದು. ಈದಿನ ಸಹೋದರನಿಗೆ ಸಹೋದರಿಯರು(Brother-Sister) ನೋಲು(ರಾಖಿ) ಕಟ್ಟುವ ಮೂಲಕ ಶುಭ ಹಾರೈಸಲಾಗುತ್ತೆ. ಇಂದು ಪಟ್ಟಣದಲ್ಲಿ ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ವಯಸ್ಸಿನ ಅಂತರವಿಲ್ಲದೆ ಇದರಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಇದೆ. ಹೀಗಾಗಿ ಪಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ರಾಖಿ(Raksha Bandhan) ಕಟ್ಟಲಾಗುತ್ತೆ. ನಂತರ ಸಿಹಿ ತಿನಿಸಲಾಗುತ್ತೆ. ಸಹೋದರರು ಸಹೋದರಿಯ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ. ಹೀಗಾಗಿ ಸಿಂದಗಿ ಪಟ್ಟಣದಲ್ಲಿ ನೋಲು ಹುಣ್ಣಿಮೆಯನ್ನು ಸಡಗರದಿಂದ ನೆರವೇರಿಸಲಾಗುತ್ತಿದೆ. ನೂರಾರು ಬಗೆಯ ರಾಖಿಗಳು ಮಾರುಕಟ್ಟೆಯಲ್ಲಿದ್ದು, ಖರೀದಿಯ ಭರಾಟೆ ಸಹ ಜೋರಾಗಿದೆ.
ಯಾವುದೇ ಜಾತಿ, ಮತ, ಪಂಥ, ಧರ್ಮದ ಭೇದವಿಲ್ಲದೆ ರಕ್ಷಾ ಬಂಧನ ಆಚರಿಸಲಾಗುತ್ತೆ. ಇದರ ಹಿಂದೆ ಐತಿಹಾಸಿ, ಪೌರಾಣಿಕ ಹಿನ್ನಲೆಯಿದೆ. ಸಹೋದರನ ಯೋಗಕ್ಷಮ ಹಾಗೂ ರಕ್ಷಣೆಯ ಸಂಕೇತವಾಗಿ ಇದನ್ನು ಆಚರಿಸಲಾಗುತ್ತೆ. ಈ ಕಾರಣಕ್ಕೆ ಮದುವೆಯಾಗಿ ಗಂಡನ ಮನೆಗೆ ಹೆಣ್ಮಕ್ಕಳು ನಾಗರ ಪಂಚಮಿ ಹಬ್ಬದಂದು ಬರದೆ ಇದ್ದರೂ ರಕ್ಷಾ ಬಂಧನದಂದು ತವರು ಮನೆಗೆ ಬಂದು ರಾಖಿ ಕಟ್ಟುತ್ತಾರೆ. ಸಹೋದರಿಯ ಪ್ರೀತಿಯ ಸಂಕೇತವಾಗಿ ಸಹೋದರರು ಸಹ ಏನಾದರೂ ಉಡುಗೊರೆ ನೀಡುತ್ತಾರೆ. ಈ ಮೂಲಕ ನಿನ್ನ ರಕ್ಷಣೆಗೆ ಯಾವಾಗ ನಿಲ್ಲುತ್ತೇನೆ ಎನ್ನುವ ಸಂದೇಶ ಸಹ ಇದರಲ್ಲಿದೆ.