Ad imageAd image

ಸಿಂದಗಿ: ಕಾಟಾಚಾರದ ಡೆಂಗ್ಯೂ ನಿಯಂತ್ರಣ ಸಭೆ!

ಪಟ್ಟಣದ ತಾಲೂಕು ಆಡಳಿತ ಕಛೇರಿಯಲ್ಲಿ ಡೆಂಗ್ಯೂ(Dengue) ನಿಯಂತ್ರಣ ಸಭೆಯನ್ನು ಗ್ರೇಡ್-2 ತಹಶೀಲ್ದಾರ್ ಐ.ಜೆ.ಬಳಗಾನೂರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.

Nagesh Talawar
ಸಿಂದಗಿ: ಕಾಟಾಚಾರದ ಡೆಂಗ್ಯೂ ನಿಯಂತ್ರಣ ಸಭೆ!
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದ ತಾಲೂಕು ಆಡಳಿತ ಕಛೇರಿಯಲ್ಲಿ ಡೆಂಗ್ಯೂ(Dengue) ನಿಯಂತ್ರಣ ಸಭೆಯನ್ನು ಗ್ರೇಡ್-2 ತಹಶೀಲ್ದಾರ್ ಐ.ಜೆ.ಬಳಗಾನೂರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಡೆಂಗ್ಯೂ ರೋಗವು ರಾಜ್ಯದಲ್ಲಿ ತುಂಬಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ತಾಲೂಕಾಡಳಿತ ನಡೆಸಿದ ನಿಯಂತ್ರಣ ಸಭೆಗೆ ಸಂಬಂಧಿಸಿದ ಅಧಿಕಾರಿಗಳು ಇಲ್ಲದೇ ಕಾಟಾಚಾರಕ್ಕೆ ಮಾತ್ರ ಸೀಮಿತವಾಯಿತು.

ಆಯರ್ವೇದ ವಿಭಾಗದ ಡಾ.ಮಾಹಾಂತೇಶ ಹಿರೆಮಠ ಮಾತನಾಡಿ, ಡೆಂಗ್ಯೂ ರೋಗವನ್ನು ಹೊಗಲಾಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವಿಧ ಇಲಾಖೆಗಳಿಂದ ಬಂದಂತ ಸಿಬ್ಬಂದಿಗೆ ವಿವರಿಸಿದರು. ಆದರೆ ಅತೀ ಮುಖ್ಯವಾಗಿ ತಾಲೂಕು ಆರೋಗ್ಯಾಧಿಕಾರಿ(THO), ತಾಲೂಕು ಕ್ಚೇತ್ರ ಶಿಕ್ಷಣಾಧಿಕಾರಿ(BEO), ಸಾರಿಗೆ ಇಲಾಖೆ ಅಧಿಕಾರಿಗಳು ಗೈರಾಗಿದ್ದು ಕಂಡು ಬಂತು. ಹೀಗಾಗಿ ಡೆಂಗ್ಯೂ ನಿಯಂತ್ರಣ ಸಭೆ ಕಾಟಾಚಾರಕ್ಕೆ ಎಂಬಂತೆ ನಡೆಯಿತು.

ಈ ವೇಳೆ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಹರಿ ಕುಲಕರ್ಣಿ, ತಾಲೂಕು ಪಂಚಾಯ್ತಿ ವ್ಯವಸ್ಥಾಪಕ ಎ.ಎಚ್.ಯಾಳಗಿ, ಪುರಸಭೆ ಆರೋಗ್ಯಾಧಿಕಾರಿ ನಬಿರುಸೂಲ್ ಉಸ್ತಾದ ಸೇರಿದಂತೆ ವಿವಿಧ ಇಲಾಖೆಯ ಬೆರಳಣಿಕೆ ಅಧಿಕಾರಿಗಳಿದ್ದರು.

WhatsApp Group Join Now
Telegram Group Join Now
Share This Article