ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಕೆಆರ್ ಎಸ್ ಪಕ್ಷದ ತಾಲೂಕು ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಜಿ ನಬಿ ಹುಣಶ್ಯಾಳ ಅವರನ್ನು ತಾಲೂಕಾಧ್ಯಕ್ಷರನ್ನಾಗಿ, ಸಂಗಣ್ಣ ಬ್ಯಾಕೋಡ್ ಅವರನ್ನು ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ವಿಜಯಪುರ ಜಿಲ್ಲಾ ಉಸ್ತುವಾರಿ ವಿಜಯಕುಮಾರ ಯು.ಬಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ವ ಸದಸ್ಯರ ಸಹಮತದೊಂದಿಗೆ 11 ಜನರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಅಶೋಕ ಜಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಪೀರಣ್ಣ ಯಂಕಂಚಿ, ಪ್ರಧಾನ ಕಾರ್ಯದರ್ಶಿಯಾಗಿ ದಸ್ತಗಿರ್ ನದಾಫ್, ಕಾರ್ಯದರ್ಶಿಯಾಗಿ ರಾಮನಗೌಡ ಪಾಟೀಲ, ರಾಜು ಸಿಂಗೆ, ಸುರೇಶ ನಾಯ್ಕೋಡಿ, ಸಂಗಮೇಶ ಪತ್ತಾರ, ಪರಶುರಾಮ ಮಾದರ, ಶ್ರೀಶೈಲ್ ಡಂಗಿ, ಗೌತಮ ಬುದ್ಧ ಎಂಟಮಾನ ಅವರನ್ನು ಆಯ್ಕೆ ಮಾಡಲಾಗಿದೆ. ಪಕ್ಷದ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ಪಕ್ಷವನ್ನು ಸಂಘಟಿಸಬೇಕು ಎಂದು ತಿಳಿಸಲಾಗಿದೆ.




