ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದ ಹೊರವಲಯದ ಆಲಮೇಲ ರಸ್ತೆಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಚೀಲಗಳು ಲಾರಿಯಿಂದ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಸಿಂದಗಿಯಿಂದ ಬಳಗಾನೂರಕ್ಕೆ ಅನ್ನಭಾಗ್ಯ ಅಕ್ಕಿಯನ್ನು ತಗೆದುಕೊಂಡು ಹೊರಟಿದ್ದ ಲಾರಿಗೆ ಅಡ್ಡಲಾಗಿ ಈರುಳ್ಳಿ ವಾಹನ ಬಂದಿದ್ದರಿಂದ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ 20 ರಿಂದ 30 ಚೀಲಗಳು ನೆಲಕ್ಕೆ ಬಿದ್ದಿವೆ. ಸಾಕಷ್ಟು ಅಕ್ಕಿ ಚೀಲಗಳು ಹರಿದು ಹೋಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.