ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದ ಶಂಕರ ಬಡಾವಣೆಯ ನಿವಾಸಿ ಬಾಷಾಸಾಬ್ ಅಲ್ಲಾಭಕ್ಷ ಬನ್ನೆಟ್ಟಿ(38) ಎನ್ನುವ ವ್ಯಕ್ತಿ ಜನವರಿ 18ರ ಸಂಜೆ ಸುಮಾರು 5 ಗಂಟೆಯಿಂದ ನಾಪತ್ತೆಯಾಗಿದ್ದಾರೆ(Missing Case) ಎಂದು ಸಿಂದಗಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ. ಕಾಣೆಯಾದ ಬಾಷಾಸಾಬ್ ನ ಪತ್ನಿ ಮಾಬು ಎಂಬುವರು 2025 ಜನವರಿ 31ರಂದು ದೂರು ದಾಖಲಿಸಿದ್ದಾರೆ. ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಇದುವರೆಗೂ ಬಂದಿಲ್ಲ. ಎಲ್ಲ ಕಡೆ ಹುಡುಕಾಟ ನಡೆಸಲಾಗಿದೆ. ಕುಟುಂಬಸ್ಥರು, ಸಂಬಂಧಿಕರಲ್ಲಿಯೂ ವಿಚಾರಿಸಲಾಗಿದ್ದು, ಎಲ್ಲಿಯೂ ಪತ್ತೆಯಾಗಿರುವುದಿಲ್ಲವೆಂದು ತಿಳಿಸಲಾಗಿದೆ.
ಪತಿ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹೀಗೆ ಕುಳಿತರೆ ಸಂಸಾರ ನಡೆಯುವುದು ಹೇಗೆ. ಕೆಲಸಕ್ಕೆ ಹೋಗು ಎಂದು ಹೇಳಿದೆ. ಮುಂಜಾನೆಯಲ್ಲ ಮನೆಯಲ್ಲಿದ್ದು ಜನವರಿ 18ರ ಸಂಜೆ ಸುಮಾರು 5 ಗಂಟೆಗೆ ಹೊರಗಡೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಇಲ್ಲಿಯವರೆಗೂ ಮನೆಗೆ ಬಂದಿಲ್ಲ ಎಂದು ಕಾಣೆಯಾದ ವ್ಯಕ್ತಿಯ ಪತ್ನಿ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.