ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ನಿವೃತ್ತ ದೈಹಿಕ ನಿರ್ದೇಶಕರು, ಸಾಹಿತಿ ಕೆ.ಎಚ್ ಸೋಮಾಪುರ ಅವರ 13ನೇ ಕೃತಿ ಬಿಚ್ಚುಗತ್ತಿ 2025 ಜುಲೈ 8ರಂದು ಮಂಗಳವಾರ ಲೋಕಾರ್ಪಣೆಗೊಳ್ಳುತ್ತಿದೆ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸಿ.ಎಂ ತ್ಯಾಗರಾಜ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸಾಹಿತಿ ಡಾ.ಸಂಗಮನಾಥ ಲೋಕಾಪುರ ಗ್ರಂಥ ಅವಲೋಕನ ಮಾಡಲಿದ್ದಾರೆ ಎಂದು ಜಿ.ಪಿ ಪೋರವಾಲ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ರವಿ ಗೋಲಾ ತಿಳಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮುಂಜಾನೆ 9.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಪಾವನ ಸಾನಿಧ್ಯ, ಸಾರಂಗಮಠದ ಉತ್ತರಾಧಿಕಾರಿಗಳಾದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಪಿಇಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಬಿ.ಪಿ ಕರ್ಜಗಿ ಅಧ್ಯಕ್ಷತೆ, ತಾಳಿಕೋಟಿಯ ಶಿವಯೋಗಿ ಸಂಗಮಾರ್ಯ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್ ಪಾಟೀಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತಾಳಿಕೋಟಿಯ ಎಸ್.ಕೆ ಪದವಿ ಕಾಲೇಜು ಪ್ರಾಚಾರ್ಯರಾದ ದಯಾನಂದ ಮೂಗ್ಲಿಮಠ ಉಪಸ್ಥಿತಿ ಇರುತ್ತೆ ಎಂದು ತಿಳಿಸಿದರು.
ಈ ವೇಳೆ ಲೇಖಕರಾದ ಕೆ.ಎಚ್ ಸೋಮಾಪುರ, ಆರ್.ಡಿ ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಬಿ.ಎಂ ಸಿಂಗನಳ್ಳಿ, ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಜೆ.ಸಿ ನಂದಿಕೋಲ, ಪ್ರಾಧ್ಯಾಪಕರಾದ ಶರಣಬಸವ ಜೋಗೂರ ಹಾಜರಿದ್ದರು.