ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14, 2019ರಂದು ನಡೆದ ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮರಾದರು. ಈ ಕರಾಳ ದಿನಕ್ಕೆ 6 ವರ್ಷ ತುಂಬಿದೆ. ಹೀಗಾಗಿ ಅಂದು ಮಡಿದ ಯೋಧರಿಗೆ ಪಟ್ಟಣದಲ್ಲಿ ಗೌರವ ನಮನ ಸಲ್ಲಿಸಲಾಯಿತು. ಬಸವೇಶ್ವರ ವೃತ್ತದ ಹತ್ತಿರ ಕೇಂದ್ರಿಯ ಅರೆಸೇನಾ ಪಡೆಗಳ ಮಾಜಿ ಮತ್ತು ಹಾಲಿ ಯೋಧರ ಕ್ಷೇಮಾಭಿವೃದ್ಧಿ ಸಂಘ ಸಿಂದಗಿ ಘಟಕದ ವತಿಯಿಂದ ಶುಕ್ರವಾರ ಸಂಜೆ ಮೇಣದ ಬತ್ತಿ ಹಿಡಿದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಗಡಿಯಲ್ಲಿ ಯೋಧರ ದೇಶ ಕಾಯುತ್ತಿರುವುದರಿಂದ ನಾವೆಲ್ಲ ಸುರಕ್ಷಿತವಾಗಿದ್ದೇವೆ. ನಮ್ಮ ಮೇಲೆ ದಾಳಿ ಮಾಡುವ ದೇಶಗಳಿಗೆ ಸೈನಿಕರು ತಕ್ಕ ಉತ್ತರ ನೀಡುತ್ತಾರೆ. ಸಮಯ ಬಂದರೆ ನಾವೆಲ್ಲ ಅವರೊಂದಿಗೆ ಹೋರಾಡಬೇಕು. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆಲ್ಲ ನಮನಗಳು ಎಂದರು. ಮಾಜಿ ಸೈನಿಕ ಶ್ರೀಶೈಲ ಯಳಮೇಲಿ ಮಾತನಾಡಿ, ಅಂದು ನಡೆದ ದಾಳಿಯಲ್ಲಿ ನಮ್ಮ 40 ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಘಟನೆಗಳು ನಡೆಯಬಾರದು. ದೇಶಕ್ಕಾಗಿ ಪ್ರಾಣ ನೀಡಿದ ಸೈನಿಕರನ್ನು ನಾವೆಲ್ಲ ನೆನಪಿಸಿಕೊಳ್ಳಬೇಕು ಎಂದರು.
ಮಹಿಳೆ ಮುಖಂಡರಾದ ಶೈಲಜಾ ಸ್ಥಾವರಮಠ ಸೇರಿದಂತೆ ಇತರರು ಮಾತನಾಡಿದರು. ಈ ವೇಳೆ ಮಾಜಿ ಸೈನಿಕರಾದ ಬಸವರಾಜ ಕೊಟರಗಸ್ತಿ, ಸಿದ್ದರಾಮ ವರ್ಕೆರಾ, ಮಲಕಪ್ಪ ಕುರನಳ್ಳಿ, ಸದಾನಂದ ಧರಿಕರ, ಜಹೀರ ಪಟೇಲ, ಮಹಿಬೂಬ ಪಟೇಲ, ಜಯ ಕರ್ನಾಟಕ ಸಂಘಟನೆಯ ತಾಲೂಕಾಧ್ಯಕ್ಷ ಸಂತೋಷ ಮನಗೂಳಿ, ಎಸ್.ಜಿ ಮಲ್ಲೇದ ಸೇರಿದಂತೆ ಅನೇಕರು ಭಾಗವಹಿಸಿದ್ದರು.