ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಬಂಟನೂರು ಗ್ರಾಮದಲ್ಲಿ ಬಸವರಾಜ ಬಾಳಪ್ಪ ಪೂಜಾರಿ ಎಂಬುವರ ಹೊಲದಲ್ಲಿ ಬೆಳೆದಿದ್ದ ಬರೋಬ್ಬರಿ 133 ಕೆಜಿ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇಂಡಿ ಡಿವೈಎಸ್ಪಿ ಜಗದೀಶ್ ಹೆಚ್.ಎಸ್ ಇವರ ಮಾರ್ಗದರ್ಶನದಲ್ಲಿ ಸಿಪಿಐ ನಾನಾಗೌಡ ಪೊಲೀಸಪಾಟೀಲ, ಪಿಎಸ್ಐ ಆರಿಫ್ ಮುಶಾಪುರಿ ಇವರ ನೇತೃತ್ವದಲ್ಲಿ ಬುಧವಾರ ದಾಳಿ ನಡೆಸಲಾಗಿದೆ.
133 ಕೆಜಿ ತೂಕದ ಗಾಂಜಾದ ಅಂದಾಜು ಮೊತ್ತ ಬರೋಬ್ಬರಿ 33 ಲಕ್ಷದ 25 ಸಾವಿರ ರೂಪಾಯಿ ಎಂದು ತಿಳಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಯಾದ ಸುರೇಶ ಕೊಂಡಿ, ಭಗವಂತ ಮುಳಸಾವಳಗಿ, ಬಿ.ಪಿ ಜೋಗಿ, ಡಿ.ಎಲ್ ಪೂಜಾರಿ, ಜಟ್ಟೆಪ್ಪ ದೊಡಮನಿ ಹಾಗೂ ಪುರಸಭೆ ಸಿಬ್ಬಂದಿ ನಬಿರಸುಲ್ ಉಸ್ತಾದ್ ಸೇರಿ ಇತರರು ಭಾಗವಹಿಸಿದ್ದರು.