Ad imageAd image

ಸಿಂದಗಿ: ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮಹಾವಿದ್ಯಾಲಯಗಳ ಜಿಲ್ಲಾ ಮಟ್ಟದ ಆಟಗಳಲ್ಲಿ ಬಾಲಕರ ಥ್ರೋಬಾಲ್‌ದಲ್ಲಿ ಪ್ರಥಮಸ್ಥಾನ, ಬಾಲಕರ ನೆಟ್‌ಬಾಲ್ ದ್ವಿತೀಯ,

Nagesh Talawar
ಸಿಂದಗಿ: ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮಹಾವಿದ್ಯಾಲಯಗಳ ಜಿಲ್ಲಾ ಮಟ್ಟದ ಆಟಗಳಲ್ಲಿ ಬಾಲಕರ ಥ್ರೋಬಾಲ್‌ದಲ್ಲಿ ಪ್ರಥಮಸ್ಥಾನ, ಬಾಲಕರ ನೆಟ್‌ಬಾಲ್ ದ್ವಿತೀಯ, ಬಾಲಕಿಯರ ನೆಟ್‌ಬಾಲ್ ದ್ವಿತೀಯ, ಬಾಲಕಿಯರ ಹ್ಯಾಂಡ್‌ಬಾಲ್, ಚೆಸ್‌ನಲ್ಲಿ ದ್ವಿತೀಯ  ಸ್ಥಾನಗಳನ್ನು ಪಟ್ಟಣದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ 29 ವಿದ್ಯಾರ್ಥಿಗಳು ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 

ಇವರ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು, ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಉಪಪ್ರಾಚಾರ್ಯ ಪಿ.ವ್ಹಿ.ಮಹಲಿನಮಠ, ಸುನೀಲ ಪಾಟೀಲ, ಎನ್.ಬಿ.ಪೂಜಾರಿ, ಶಿವಶರಣ ಬೂದಿಹಾಳ, ಬಸವರಾಜ.ಬಿ.ಜಮಾದಾರ, ಡಾ.ಶರಣಬಸವ ಜೋಗೂರ, ಎಸ್.ಜಿ.ಮಾರ್ಸನಳ್ಳಿ, ಎಸ್.ಎಚ್.ಜಾಧವ, ಡಾ.ವಿಶ್ವನಾಥ ನಂದಿಕೋಲ, ಸಂಗಮೇಶ ಚಾವರ, ಎನ್.ಎಂ.ಶೆಳ್ಳಗಿ, ರೋಹಿತ ಸುಲ್ಪಿ, ದೈಹಿಕ ಉಪನ್ಯಾಸಕ ಗವಿಸಿದ್ದಪ್ಪ ಆನೆಗುಂದಿ, ರಾಹುಲ ದಾಸರ, ಸುಮಿತ್ರಾ ಕರನಾಳ, ಭಾಗ್ಯ ಕೋರಿ, ಎ.ಬಿ.ಬಮ್ಮಣ್ಣಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

WhatsApp Group Join Now
Telegram Group Join Now
Share This Article