ಪ್ರಜಾಸ್ತ್ರ ಸುದ್ದಿ
ಮಳ್ಳಿ(Malli): ಬೈಕ್ ವೊಂದಕ್ಕೆ ಕೆಎಸ್ಆರ್ ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದ ಬಳಿ ನಡೆದಿದೆ. ಶನಿವಾರ ಅಪಘಾತ ಸಂಭವಿಸಿದ್ದು, ವಿಜಯಪುರ ಜಿಲ್ಲೆಯ ಆಲಮೇಲ ಮೂಲದ ಯುವರಾಜ(30) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಕೆಂಭಾವಿಗೆ ಹೋಗಿದ್ದ ಯುವರಾಜ ಬೈಕ್ ನಲ್ಲಿ ಬರುವಾಗ ಎದುರಿನಿಂದ ಬಂದ್ ಬಸ್ ಡಿಕ್ಕಿಯಾಗಿದೆಯಂತೆ. ಮಳ್ಳಿ ಗ್ರಾಮದ ಬಳಿ ಅಪ್ಪು ಡಾಭಾ ಬಳಿ ಕಬ್ಬಿನ ಟ್ರ್ಯಾಕ್ಟರ್ ನಿಲ್ಲಿಸಲಾಗಿತ್ತಂತೆ. ಕೆಎಸ್ಆರ್ ಟಿಸಿ ಬಸ್ ಏಕಾಏಕಿ ಬಂದು ಬೈಕ್ ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಮೃತ ಯುವರಾಜ ಸಿಂದಗಿ ಎಪಿಎಂಸಿಯಲ್ಲಿರುವ ಬಿ.ಎಸ್ ಕುಲಕರ್ಣಿ ಎಂಬುವರ ಅಡತಿಯಲ್ಲಿ ಕೆಲಸ ಮಾಡುತ್ತಿದ್ದನಂತೆ. ಯಡ್ರಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.




