ಪ್ರಜಾಸ್ತ್ರ ಸುದ್ದಿ (ಸಾಂದರ್ಭಿಕ ಚಿತ್ರ)
ಸಿಂದಗಿ(Sindagi): ಬುಧವಾರ ರಾಜ್ಯಾದ್ಯಂತ ಎಸ್ಎಸ್ಎಲ್ ಸಿ ಪ್ರಥಮ ಭಾಷೆಯ ಪರೀಕ್ಷೆ ನಡೆಯಿತು. ತಾಲೂಕಿನ 25 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ಹಾಗೂ ಶಾಂತಿಯುತವಾಗಿ ನಡೆಯಿತು ಎಂದು ಬಿಇಒ ಮಹಾಂತೇಶ ಯಡ್ರಾಮಿ ತಿಳಿಸಿದ್ದಾರೆ. ಒಟ್ಟು 7,278 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇದರಲ್ಲಿ 7,118 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 160 ಗೈರಾಗಿದ್ದು, ಪರೀಕ್ಷಾ ಅಕ್ರಮಗಳಾಗಲಿ, ಡಿಬಾರ್ ಆಗಲಿ ನಡೆದಿಲ್ಲ ಎಂದು ತಿಳಿಸಿದ್ದಾರೆ.




