Ad imageAd image

ಸಿಂದಗಿ: ಶೀಘ್ರ ಹನುಮಾನ ಮೂರ್ತಿ ಪ್ರತಿಷ್ಠಾಪನೆ

ಪಟ್ಟಣದ ಬಂದಾಳ ರಸ್ತೆಯ ನೀಲಗಂಗಾ ನಗರದಲ್ಲಿ ನೂತನವಾಗಿ ನಿರ್ಮಾಣವಾದ ಶೀಘ್ರ ಹನುಮಾನ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನಾ ಸಮಾರಂಭವನ್ನು ರಿಬ್ಬನ್ ಕತ್ತರಿಸುವ ಮೂಲಕ ಕನ್ನೊಳ್ಳಿ

Nagesh Talawar
ಸಿಂದಗಿ: ಶೀಘ್ರ ಹನುಮಾನ ಮೂರ್ತಿ ಪ್ರತಿಷ್ಠಾಪನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದ ಬಂದಾಳ ರಸ್ತೆಯ ನೀಲಗಂಗಾ ನಗರದಲ್ಲಿ ನೂತನವಾಗಿ ನಿರ್ಮಾಣವಾದ ಶೀಘ್ರ ಹನುಮಾನ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನಾ ಸಮಾರಂಭವನ್ನು ರಿಬ್ಬನ್ ಕತ್ತರಿಸುವ ಮೂಲಕ ಕನ್ನೊಳ್ಳಿ ಸಿದ್ದಲಿಂಗ ಶ್ರೀಗಳು, ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಮಂಡಲದ ಕೋಶಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಉದ್ಘಾಟಿಸಿದರು.

ಈ ವೇಳೆ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ರಾಮಾಯಣದಲ್ಲಿ ನಾವು ಹೆಚ್ಚಾಗಿ ಕೇಳುವ ಇಬ್ಬರ ಹೆಸರೆಂದರೆ ಅದುವೇ ಶ್ರೀರಾಮ ಮತ್ತು ಹನುಮಂತ. ಹನುಮಂತನು ಶ್ರೀರಾಮನ ಪರಮ ಭಕ್ತ. ಅಂತೆಯೇ ಶ್ರೀರಾಮನ ಬಾಳಿನಲ್ಲೂ ಹನುಮಂತನಿಗೆ ವಿಶೇಷ ಮನ್ನಣೆಯಿದೆ. ಮುಂಬರುವ ದಿನಮಾನಗಳಲ್ಲಿ ಈ ದೇವಸ್ಥಾನದ ಮೇಲಹೊದಿಕೆಯ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡುವೆ. ಶ್ರೀಶೈಲಗೌಡ ಅವರು ದೇವಸ್ಥಾನಕ್ಕೆ ಮೂರ್ತಿ ನೀಡಿದ್ದು ಶ್ಲಾಘನೀಯ ಎಂದರು. ಕನ್ನೊಳ್ಳಿ ಶ್ರೀಮಠದ ಸಿದ್ದಲಿಂಗ ಶಿವಾಚಾರ್ಯರು ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮೂರ್ತಿ ಪ್ರತಿಷ್ಠಾಪನೆಗೂ ಮೊದಲು ಪಟ್ಟಣದಲ್ಲಿ ಮೆರವಣಿಗೆ ನಡೆಯಿತು. ಕುಂಭಮೇಳ, ಧ್ವನಿವರ್ಧಕ ಹಾಗೂ ವಾಧ್ಯಗಳೊಂದಿಗೆ ಸಂಭ್ರಮ ಸಡಗರದಿಂದ ದೇವಸ್ಥಾನ ತಲುಪಿತು. ದಾರಿಯೂದ್ದಕ್ಕೂ ಭಕ್ತಾಧಿಗಳು ಮೂರ್ತಿಗೆ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು. ಕಾರ್ಯಕ್ರಮದಲ್ಲಿ ಮಹಾದೇವ ಬಿರಾದಾರ, ಶ್ರೀಶೈಲ ರೆಬಿನಾಳ, ಮಲ್ಲಿಕಾರ್ಜುನ ಸುಳಿಭಾವಿ, ಪರಮಾನಂದ ಕರಿಗೊಂಡ, ಶಂಕರೆಪ್ಪ ಬಿರಾದಾರ, ಪ್ರೇಮನಗೌಡ ಬಿರಾದಾರ, ಲಕ್ಷ್ಮಣ ಪೂಜಾರಿ, ಭೀಮನಗೌಡ ಬಿರಾದಾರ, ಗೊಲ್ಲಾಳಪ್ಪ ರೊಳ್ಳಿ, ಗಂಗಾಧರ ಕಿಣಗಿ, ವಿನೋದ ಕಂಗಳ, ಮುತ್ತು ಮಂದೇವಾಲಿ, ರುದ್ರಯ್ಯ ಹಿರೇಮಠ ಸೇರಿದಂತೆ ಅನೇಕರಿದ್ದರು.

WhatsApp Group Join Now
Telegram Group Join Now
Share This Article